ಪಡುಬಿದ್ರಿ, ಜ 19 (daijiworldNews/SM): ಕೊರಗಜ್ಜ ದೈವದ ಬಗ್ಗೆ ಕೇಳಿ ತಿಳಿದಿದ್ದೇನೆ. ಆದರೆ ಪ್ರಥಮ ಬಾರಿಗೆ ಸನ್ನಿಧಾನಕ್ಕೆ ಭೇಟಿ ನೀಡುತ್ತಿದ್ದೇನೆ. ನನ್ನ ಮನಸ್ಸಿನ ಬೇಡಿಕೆಯನ್ನು ಅಜ್ಜನ ಬಳಿ ಹೇಳಿಕೊಂಡಿದ್ದೇನೆ. ಅಜ್ಜನ ಅನುಗ್ರಹದಿಂದ ಎಲ್ಲವೂ ಸುಸೂತ್ರವಾಗಿ ಈಡೇರುವ ಭರವಸೆಯಿದೆ ಎಂದು ಕನ್ನಡ ಚಿತ್ರ ನಟಿ ಪ್ರೇಮ ಅವರು ಹೇಳಿದ್ದಾರೆ.
ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಾಯಕಿಯಾಗಿ ಜನ ಮೆಚ್ಚುಗೆ ಗಳಿಸಿರುವ ಕೊಡಗಿನ ಕನ್ಯೆ ಪ್ರೇಮಾ ಕಾಪುವಿನ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ ಮನದಾಳದ ಆಸೆಯನ್ನು ಕೊರಗಜ್ಜನ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ವಿಶೇಷವಾಗಿ ಕಂಕಣ ಭಾಗ್ಯದ ಕುರಿತು ಪ್ರಾರ್ಥನೆ ಸಲ್ಲಿಸಿದ ನಟಿ ಪ್ರೇಮಾ ಅವರು ಈಗಾಗಲೇ ನೋಡಿರುವ ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.