ಮಂಗಳೂರು,ಮಾ.10(AZM):ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆ ದ.ಕ.ಜಿಲ್ಲಾ ಜೆಡಿಎಸ್ ಪಕ್ಷದಿಂದ ರಾಜ್ಯಕ್ಕೆ ಸಂಭಾವ್ಯ ಪಟ್ಟಿಯನ್ನು ಇಂದು ಸಲ್ಲಿಸಲಾಗಿದೆ ಎಂದು ಜೆಡಿ ಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಹೇಳಿದ್ದಾರೆ.
ಮಂಗಳೂರಿನ ಖಾಸಗೀ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಬಿ.ಎಂ ಫಾರೂಕ್,ಎಂ.ಬಿ ಸದಾಶಿವ, ಸುಶೀಲ್ ನೊರೋನ್ಹಾ, ಹಾಗೂ ಭೋಜೇಗೌಡ ಸೇರಿದಂತೆ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಸಲ್ಲಿಸಲಾಗಿದೆ ಎಂದರು.
ಇನ್ನು ದ.ಕ. ಜಿಲ್ಲೆಗೆ ಸರಕಾರ ಏನೂ ಮಾಡಿಲ್ಲ ಎನ್ನುವ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಅವರು, ಸರಕಾರ ಜನರಿಗೆ ಏನು ಕೊಟ್ಟಿದೆ ಎಂಬುವುದನ್ನು ರೈತರ ರೂಪೆ ಕಾರ್ಡ್ ನೋಡಲಿ ಎಂದ ಅವರು, ರೈತರ ಸಹಕಾರಿ ಬ್ಯಾಂಕ್ ಗಳ ಸಾಲ ಮನ್ನಾಕ್ಕೆ 114 ಕೋಟಿ ರೂಪಾಯಿ ದ.ಕ. ಜಿಲ್ಲೆಗೆ ನೀಡಿದೆ ಎಂದು ಹೇಳಿದರು.