ಮುಲ್ಕಿ, ಜ 19 (DaijiworldNews/SM): ದೈವಿಕ ಕರೆಯ ಕೇಂದ್ರ ಕಾರ್ನಾಡು ಮುಲ್ಕಿಯಲ್ಲಿ ಸಂ. ಆರ್ನಾಲ್ಡ್ ಜೋನ್ಸಾನ್ ಅವರ ವಾರ್ಷಿಕ ಮಹೋತ್ಸವವು ವಿಜೃಂಭನೆಯಿಂದ ಆಚರಿಸಲಾಯಿತು.
ವಾರ್ಷಿಕ ಮಹೋತ್ಸವ ಹಿನ್ನೆಲೆಯಲ್ಲಿ ಎರಡು ದಿನಗಳ ದೇವರ ವಾಕ್ಯದ ಪ್ರಾರ್ಥನಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಮುಂಬೈಯ ಬ್ರ. ಪ್ರಕಾಶ್ ಡಿಸೋಜ ಹಾಗೂ ಸಂಗಡಿಗರು ಪವಿತ್ರಾತ್ಮರಿಂದ ಅಭಿಷಿಕ್ತವಾದ ಪ್ರಾರ್ಥನಾ ಕೂಟ ನೆರವೇರಿಸಿದರು.
ಮೊದಲ ದಿನದ ಪ್ರಾರ್ಥನ ಕೂಟದ ಸಂದರ್ಭದಲ್ಲಿ ಬಲಿಪೂಜೆಯನ್ನು ಸುರತ್ಕಲ್ ವಾರಡೊ ಧರ್ಮಗುರುಗಳಾದ ಫಾ. ಆಸ್ಟಿನ್ ಪೇರಿಸ್ ಇವರ ಮುಂದಾಳುತ್ವದಲ್ಲಿ ನೆರವೇರಿಸಲಾಯಿತು. ಸುಮಾರು ೨ ಸಾವಿರಕ್ಕೂ ಅಧಿಕ ಮಂದಿ ಭಕ್ತಾಧಿಗಳು ಹಾಜರಿದ್ದರು. ಇನ್ನು ಹಬ್ಬದ ದಿನ ಮೂರು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಭಾಗವಹಿಸಿದ್ದರು.
ಬೆಳಗ್ಗೆ ೯ ಗಂಟೆಯಿಂದ ಸಂಜೆಯ ತನಕ ಪ್ರಾರ್ಥನಾ ಸಮಾವೇಶ ಜರಗಿತು. ದೈವಿಕ ಕರೆಯ ನಿರ್ದೇಶಕರು ಹಾಗೂ ಹಿರಿಯ ಧರ್ಮ ಗುರು ಅಬ್ರಹಾಂ ಡಿಸೋಜ ಅವರ ಮುಂದಾಳುತ್ವದಲ್ಲಿ ಎಲ್ಲಾ ಕಾರ್ಯಗಳು ಜರಗಿದವು.