ಕಾರ್ಕಳ, ಜ 18 (DaijiworldNews/HR): ಕಾರ್ಕಳವು ಪ್ರವಾಸೋದ್ಯಮ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಸರ್ಕ್ಯೂಟ್ ಆಗಿ ಪರಿವರ್ತಿಸುವ ಯೋಜನೆಯ ಮುಕುಟ ಪ್ರಾಯವಾಗಿ ಪರಶುರಾಂ ಥೀಂ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದು ಮೊದಲ ಹಂತದ ಕಾರ್ಯಕ್ರಮ ಮುಂದೆ ಹಂತಹಂತವಾಗಿ ಅಭಿವೃದ್ಧಿಗೊಳಿಸಿ ಸುಸ್ಥಿರ ಪ್ರವಾಸೋದ್ಯಮ ಕ್ಷೇತ್ರವಾಗಿ ಕಾರ್ಕಳ ಅಭಿವೃದ್ಧಿ ಪಡಿಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ಕುಮಾರ್ ಹೇಳಿದರು.
ಕಾರ್ಕಳದ ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿ ಜ.27ರಿಂದ 29ರ ತನಕ ನಡೆಯುವ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಪೂರ್ವಭಾವಿಯಾಗಿ ಥೀಂ ಪಾಕ್ ತಳಭಾಗದಲ್ಲಿ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತ ವಹಿಸಿ ಅವರು ಮಾತನಾಡಿದ ಅವರು, ಪ್ರವಾಸೋದ್ಯಮದ ಜತೆಗೆ ಧಾರ್ಮಿಕವಾಗಿಯೂ ಸ್ಪರ್ಶ ನೀಡುವ ಕಾರ್ಯವಾಗಿದೆ. ಇದೇ ಯೋಜನೆಯು ಹಲವು ವರ್ಷಗಳ ಹಿಂದಿನದಾಗಿದ್ದು, ಕಳೆದ ಒಂದು ವರ್ಷದ ಹಿಂದೆ ಕೈಗೊಂಡಿರುವ ಫಲಶ್ರಮದಿಂದಾಗಿ ಇಡೀ ವಿಶ್ವವೇ ಕಾರ್ಕಳದತ್ತ ನೋಟ ಬೀರಿಸುವಂತೆ ಮಾಡಿದೆ. ಆ ಮೂಲಕ ದೇಶದಲ್ಲಿ ಅತೀ ಎತ್ತರದ ಪರಶುರಾಮನ ಪ್ರತಿಮೆ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದರು.
ಜ.27ರಂದು ಸಿ.ಎಂ ಬಸವರಾಜ್ ಬೊಮ್ಮಾಯಿ ಪರಶುರಾಮ ಥೀಪಾರ್ಕ್ ಲೋಕಾರ್ಪಣೆಗೈಯಲಿದ್ದಾರೆ. ಮರುದಿನ ಜ.28ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮೂರು ದಿನಗಳ ಅವಧಿಯಲ್ಲಿ ರಾಜ್ಯದ ಹಲವು ಮಂದಿ ಸಚಿವರು, ಜಿಲ್ಲೆಯ ಶಾಸಕರುಗಳು, ತುಳುನಾಡಿನ ವಿವಿದಡೆಯಿಂದ ಸಾರ್ವಜನಿರಕು, ಸ್ಥಳಿಯರು ಭಾಗವಹಿಸಲಿದ್ದಾರೆ ಎಂಬ ಮಾಃಇತಿಯನ್ನು ಇದೇ ಸಂದರ್ಭದಲ್ಲಿ ನೀಡಿದರು.
ನಿಟ್ಟೆ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ವಿನಯ ಹೆಗ್ಡೆ ಅವರು ಪರಶುರಾಮ ಥೀಂ ಪಾರ್ಕ್ನ ಕಚೇರಿ ಉದ್ಘಾಟಿಸಿ ಮಾತನಾಡಿ, ಕಾರ್ಕಳ 60-70 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗೊಂಡು ಬದಲಾವಣೆ ಕಂಡಿಲ್ಲ. ಸಚಿವ ಸುನಿಲ್ಕುಮಾರ್ ಈ ಎಲ್ಲ ಕೆಲಸಗಳನನು ಸಚಿವರಾದ ಬಳಿಕ ಮಾಡಿದ್ದಾರೆ. ಅವರಿಂದ ದೇವರು ಮೆಚ್ಚುವ ಕಾರ್ಯ ನಡೆದಿದೆ ಎಂದರು.
ಕಲಾವಿದ ಪ್ರಸನ್ನ ಶೆಟ್ಟಿ ರಚಿಸಿದ ಪರಶುರಾಮ ಥೀಂ ಪಾರ್ಕ್ ಉದ್ಘಾಟನೆಯ ಹಾಡು ಬಿಡುಗಡೆಗೊಳಿಸಲಾಯಿತು.
ಕಾರ್ಕಳ ವೆಂಕಟರಮಣ ದೇವಸ್ಥಾನದ ಒಂದನೇ ಮೊಕ್ತೇಸರ ಜಯರಾಮ್ ಪ್ರಭು, ಅಡಪ್ಪಾಡಿ ಪಳ್ಳಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್ ಇವರು ಸಂದಭೋಚಿತವಾಗಿ ಮಾತನಾಡಿ ಶುಭಾಸಂಸನೆಗೈದರು.
ಬೈಲೂರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕರುಣಾಕರ ಹೆಗ್ಡೆ, ಹಿರಿಯ ವೈದ್ಯ ದಿನೇಶ್ಚಂದ್ರ ಹೆಗ್ಡೆ, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಕೋಟ್ಯಾನ್, ಡಾ.ದಿನೇಶ್ಚಂದ್ರ ಹೆಗ್ಡೆ, ಯಕ್ಷಗಾನ ಮೇಳದ ವ್ಯವಸ್ಥಾಪಕ ಕಿಶೋರು ಹೆಗ್ಡೆ, ಯರ್ಲಪ್ಪಾಡಿ ಪ. ಅಧ್ಯಕ್ಷೆ ಪ್ರಮೀಳ ಪೂಜಾರಿ, ಬೈಲೂರು ಅಧ್ಯಕ್ಷ ಜಗದೀಶ್ ಪೂಜಾರಿ, ನೀರೆ ಅಧ್ಯಕ್ಷೆ ಶಾಲಿನಿ, ವಕೀಲ ಎಂ.ಕೆ ವಿಜಯಕುಮಾರ್, ಬೋಳ ಪ್ರಭಾಕರ ಕಾಮತ್, ಹೆಬ್ರಿ ತಹಶಿಲ್ದಾರ್ ಪುರಂದರ ಕೆ, ಕಾರ್ಕಳ ಇಒ ಗುರುದತ್ತ್, ಹೆಬ್ರಿ ಇಒ ಶಶಿಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮ, ಡಿವೈಎಸ್ಪಿ ವಿಜಯಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ವೇದಿಕೆಯಲ್ಲಿದ್ದರು.
ನಿವೃತ್ತ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಪ್ರಸ್ತಾವನೆಗೈದರು, ತಹಶಿಲ್ದಾರ್ ಪ್ರದೀಪ ಕುರ್ಡೆಕರ್ ಸ್ವಾಗತಿಸಿದರು. ಆನಂದ ಪೂಜಾರಿ ವಂದಿಸಿ, ಹರೀಶ್ ನಾಯಕ್ ನಿರೂಪಿಸಿದರು. ಬಳಿಕ ಪರಶುರಾಮ ಥೀಂ ಪಾರ್ಕ್ ತನಕ ಜಾಥದಲ್ಲಿ ತೆರಳಿ ಬಲೂನ್ ಹಾರಿ ಬಿಡಲಾಯಿತು.