ಮಂಗಳೂರು, ಜ 17 (DaijiworldNews/DB): ಕಂಬ್ಲಪದವು ನಿವಾಸಿ ಗಣೇಶ ಎ. ಅವರು ಮಂಡಿಸಿದ "ಸ್ಟ್ಯಾಟಿಕ್ ಆಂಡ್ ಡೈನಮಿಕ್ ಕ್ಯಾರಟ್ಕ್ರಸ್ಟಿಕ್ಸ್ ಆಫ್ ಮಲ್ಟಿ ಪ್ಯಾಡ್ ಅಡ್ಜಷ್ಟೇಬಲ್ ಬೇರಿಂಗ್ಸ್ ವಿಥ್ ಏಸ್ಸಿಮೆಟ್ರಿಕ್ ಅಡ್ಜಷ್ಟ್ಮೆಂಟ್ಸ್ "ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪಿಎಚ್ಡಿ ಪದವಿ ಪ್ರದಾನ ಮಾಡಿದೆ.
ಅವರಿಗೆ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕಾನಿಕಲ್ ಆಂಡ್ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ರಘುವೀರ್ ಪೈ ಬಿ. ಹಾಗೂ ಡಾ. ಎಸ್.ಎಂ. ಅಬ್ದುಲ್ ಖಾದರ್ ಅವರು ಮಾರ್ಗದರ್ಶನ ಮಾಡಿದ್ದರು.
ಪ್ರಸ್ತುತ ಗಣೇಶ ಅವರು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಆಂಡ್ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಕಂಬ್ಲಪದವಿನ ಶ್ರೀಪತಿ ಭಟ್ ಎ. ಎನ್. ಹಾಗೂ ಶ್ರೀಮತಿ ಎಸ್. ಭಟ್ ಅವರ ಪುತ್ರ.