ಕಾಸರಗೋಡು, ಜ 16 (DaijiworldNews/SM): ಕೇರಳದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ ಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳ, ಬಸ್ಸು , ವಾಹನ ಗಳಲ್ಲಿ ಸಂಚರಿಸುವ ಸಮಯ , ಮಳಿಗೆಗಳು , ಕೆಲಸ ನಿರ್ವಹಿಸುವ ಸ್ಥಳ ಗಳಲ್ಲಿ ಕಡ್ಡಾಯ ವಾಗಿ ಮಾಸ್ಕ್ ಧರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಸಾಮಾಜಿಕ ಅನಂತರ ಕಾಯಬೇಕು ಎಂದು ಆದೇಶ ದಲ್ಲಿ ತಿಳಿಸಿದೆ. ಕೋವಿಡ್ ನ ಹೊಸ ರೂಪಾಂತರಿ ಪತ್ತೆಯಾದ ಹಿನ್ನಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕೆಲ ನಿಯಂತ್ರಣ ಗಳನ್ನು ಜಾರಿಗೆ ತರಲಾಗಿದ್ದು, ಇದರಂತೆ ಕೇರಳದಲ್ಲಿ ಕೆಲ ಕಟ್ಟು ನಿಟ್ಟಿನ ನಿರ್ದೇಶನ ಗಳನ್ನು ಜಾರಿಗೆ ತರಲಾಗಿದೆ.ಮಾಸ್ಕ್ ಜೊತೆಗೆ ಸಾನಿಟೈಸರ್ ಕಡ್ಡಾಯ ಗೊಳಿಸಿದೆ..ಈಗ ಭಯಪಡುವ ಸ್ಥಿತಿ ಕೆರಕದಲ್ಲಿಲ್ಲ. ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಹಿನ್ನಲೆಯಲ್ಲಿ ಈ ನಿಯಂತ್ರಣ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.