ಕಾಸರಗೋಡು,ಮಾ 11 (MSP): ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಅಂತಾರಾಜ್ಯ ಗಡಿ ಪ್ರದೇಶದ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥ- ಆದಾಯ ತೆರಿಗೆ- ಅಬಕಾರಿ ಮುಖ್ಯಸ್ಥರ ಸಭೆ ಮಾ.11ರ ಭಾನುವಾರ ಸಂಜೆ ಕಾಸರಗೋಡಿನಲ್ಲಿ ನಡೆಯಿತು.
ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಕರೆದ ಅವಲೋಕನ ಸಭೆಯಲ್ಲಿ ಚುನಾವಣೆಗೆ ಸಂಬಂಧಪಟ್ಟಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಗಡಿ ಪ್ರದೇಶದೊಳಗೆ ಬಂದು ಹಿಂಸೆ ನಡೆಸುವವರು,ಮಧ್ಯ ಸಾಗಾಟ, ಸಾಮಾಜಿಕ ಜಾಲತಾಣಗಳ ಮೂಲಕ ಅಹಿತಕರ ಘಟನೆಗಳಿಗೆ ಆಸ್ಪದ ಕೊಡುವವವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಲಾಯಿತು. ಗಡಿ ಪ್ರದೇಶದಲ್ಲಿ ಅಕ್ರಮ ಮದ್ಯ ತಯಾರಿ ಘಟಕ ಹಾಗೂ ದಾಸ್ತಾನು ಬಗ್ಗೆ ತಪಾಸಣೆ ನಡೆಸಲಾಗುವುದು. ತಲೆ ಮರೆಸಿಕೊಂಡಿರುವ ಅಂತಾರಾಜ್ಯ ಆರೋಪಿಗಳನ್ನು ಪತ್ತೆ ಹಚ್ಚಿ ಆಯಾರಾಜ್ಯಗಳಿಗೆ ಒಪ್ಪಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಉಪ ಆಯುಕ್ತ ಶಶಿಕಾಂತ್, ಕೊಡಗು ಉಪ ಆಯುಕ್ತ ಅನೀಸ್ ಜೋಯ್, ತಲಶ್ಯೆರಿ ಉಪ ಜಿಲ್ಲಾಧಿಕಾರಿ ಅಬಿಲ್, ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ಜೇಮ್ಸ್ ಜೋಸೆಫ್ , ಕೊಡಗು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುಮನ್ , ಹೆಚ್ಚುವರಿ ಡಿ ವೈ ಎಸ್ ಪಿ ಪಿ . ಬಿ ಪ್ರಬೋಶ್, ಕಾಸರಗೋಡು ಚುನಾವಣಾ ಉಪ ಜಿಲ್ಲಾಧಿಕಾರಿ ವಿ. ಪಿ ಅಬ್ದುಲ್ ರಹಮಾನ್ , ಕಣ್ಣೂರು ಜಿಲ್ಲಾ ಚುನಾವಣಾ ಉಪ ಜಿಲ್ಲಾಧಿಕಾರಿ ಎ. ಕೆ ರಮೇ೦ದ್ರನ್ ಉಪಸ್ಥಿತರಿದ್ದರು