ಉಡುಪಿ, ಜ 15 (DaijiworldNews/DB): ಅಡಿಕೆ ಕೀಳುತ್ತಿದ್ದ ವ್ಯಕ್ತಿಯೊಬ್ಬರು ಮರ ಮುರಿದು ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ನಗರದ ಬಸ್ ನಿಲ್ದಾಣದ ಸಮೀಪದ ಮತ್ತದಬೆಟ್ಟು ನಿವಾಸಿ ಶ್ಯಾಮ್ ಅಂಚನ್ (59) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಘಟನೆ ಜನವರಿ 12ರಂದು ಸಂಭವಿಸಿದೆ. ಶ್ಯಾಮ್ ಅವರು ಮರದಿಂದ ಅಡಿಕೆ ಕೀಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟರು.
ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಇವರು ಪರ್ಕಳದಲ್ಲಿ ಪಾಲುದಾರಿಕೆಯಲ್ಲಿ ಬೇಕರಿ ನಡೆಸುತ್ತಿದ್ದರು.