ಕಾಸರಗೋಡು, ಜ 14 (DaijiworldNews/DB): ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತಂದಿಡಲಾಗಿದ್ದ ಸಾಮಗ್ರಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ದೇವಿ ನಗರದಲ್ಲಿ ವಾಸವಾಗಿರುವ ತಮಿಳುನಾಡು ಮೂಲದ ರಾಣಿ (39) ಮತ್ತು ಸುಧಾ (30) ಬಂಧಿತರು.
ರಸ್ತೆ ಬದಿಯಲ್ಲಿದ್ದ 81 ಕಿಲೋ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ಸರಳನ್ನು ಕಳವು ಮಾಡಿದ್ದು, ಗುಜರಿ ಅಂಗಡಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಲಭಿಸಿದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಪೊಲೀಸರು ಮಹಿಳೆಯರಿಬ್ಬರನ್ನು ಬಂಧಿಸಿದರು. ವಿಚಾರಿಸಿದಾಗ ಹೆದ್ದಾರಿ ಬದಿಯಿಂದ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.