ಮಂಗಳೂರು, ಜ 13 (DaijiworldNews/HR): ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ 6ನೇ ತರಗತಿಯ ಕುಮಾರಿ ಜೆಸ್ನೀಯ ಕೊರೆಯಾರವರು ಹರಿಯಾಣದ ಗುರ್ಗಾಂವ್ನ ಶಾಲೋಂ ಹಿಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಜನವರಿಯ 10 ಮತ್ತು 11ನೇ ತಾರೀಕಿನಂದು ನಡೆದ ಸಿ.ಬಿ.ಎಸ್.ಇ. ಶಾಲೆಯ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 500 ಹಾಗು 1000 ಮೀಟರ್ ರಿಂಕ್ ರೇಸ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಕ್ರೀಡಾ ತಾರೆ ಕುಮಾರಿ ಜೆಸ್ನಿಯ ರವರಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳು ಇವರ ಸಾಧನೆಯನ್ನು ಗುರುತಿಸಿ ಶಾಲೆಯ ವೇದಿಕೆಯಲ್ಲಿ ಶಾಲು ಹೊದಿಸಿ ಫಲಪುಷ್ಪ, ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದರು.
ಜೆಸ್ನಿಯಾಳ ಮುಂದಿನ ಕ್ರೀಡಾ ಭವಿಷ್ಯ ಇನ್ನೂ ಉಜ್ವಲವಾಗಲಿ ಎಂದು ಎಲ್ಲರೂ ಹಾರೈಸಿದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಶಾಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆದೊಯ್ಯುವ ಮೂಲಕ ಅವರ ಸಾಧನೆಯನ್ನು ಗುರುತಿಸಲಾಯಿತು.
ಜೆಸ್ನಿಯಾರವರು ಜೆರೊಮ್ ಕೊರೆಯಾ ಹಾಗು ಶ್ರೀಮತಿ ಪ್ರೀತಾ ಕೊರೆಯಾ ರವರ ಪುತ್ರಿಯಾಗಿದ್ದಾಳೆ ಹಾಗೂ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ನ ಶ್ರೀಯುತ ಮಹೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜೆಸ್ನೀಯ ಈಗಾಗಲೇ 3 ಬಾರಿ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ 4 ಚಿನ್ನದ ಪದಕ, ಸಿಬಿಎಸ್ ಸಿ ಬೋರ್ಡ್ ನಡೆಸಿದ ಸೌತ್ ಝೋನ್ - 2 ಸ್ಕೇಟಿಂಗ್ ಸ್ಪರ್ಧೆತಲ್ಲಿ 2 ಚಿನ್ನದ ಪದಕ, ರಾಜ್ಯ ಮಟ್ತದ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ 3 ಚಿನ್ನದ ಪದಕ, 4 ಬೆಳ್ಳಿ ಪದಕ, 1 ಕಂಚಿನ ಪದಕ ಪಡೆದಿದ್ದಾರೆ. ಹಾಗೂ ಜಿಲ್ಲಾ ಹಂತದ ಸ್ಕೇಟಿಂಗ್ ಸ್ಪರ್ಧೆಯಲ್ಲೂ ಹಲವು ಪದಕಗಳನ್ನು ತನ್ನದಾಗಿಸಿ ಸಾಧನೆ ಮಾಡಿದ್ದಾರೆ.