ಕಾಸರಗೋಡು, ಜ 13 (DaijiworldNews/DB): ಹಾಡಹಗಲೇ ಮನೆಗೆ ನುಗ್ಗಿ 11 ಪವನ್ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಹೇರೂರಿನ ಯಕ್ಷಿತ್ (23) ಬಂಧಿತ ಆರೋಪಿ. ಒಂದು ವಾರದ ಹಿಂದೆ ಹೇರೂರಿನ ಆನಂದ ಎಂಬವರ ಮನೆಯಲ್ಲಿ ಈತ ಕೃತ್ಯ ಎಸಗಿದ್ದ.
ಆನಂದ ಹಾಗೂ ಕುಟುಂಬದವರು ಅಂದು ಬೆಳಗ್ಗೆ ಮನೆಗೆ ಬೀಗ ಹಾಕಿ ಸಮೀಪದ ದೇವಸ್ಥಾನಕ್ಕೆ ತೆರಳಿದ್ದರು. ಮಧ್ಯಾಹ್ನ ಮನೆಗೆ ಬಂದಾಗ ಹಿಂಬದಿಯ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಒಳ ಹೋಗಿ ನೋಡಿದಾಗ ಮನೆಯ ಕೊಠಡಿಯಲ್ಲಿ ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ ಕಳವಾಗಿತ್ತು.
ಈ ಸಂಬಂಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.