ಉಡುಪಿ, ಜ 13 ( DaijiworldNews/MS): "ಡ್ರಗ್ಸ್ ದಂಧೆಯಲ್ಲಿ ಯಾರೇ ಸಿಕ್ಕರೂ ಬಿಡಲ್ಲ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಬಯಲು ವಿಚಾರ ಕುರಿತು, ಉಡುಪಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ವೈದ್ಯ ವಿದ್ಯಾರ್ಥಿಗಳು, ಮೆಡಿಕಲ್ ಪ್ರೊಫೆಸರ್ ಗಳು, ಸುಶಿಕ್ಷಿತ ವರ್ಗವೇ ಈ ರೀತಿ ಮಾಡಿದರೆ ಏನು ಮಾಡೋಕೆ ಸಾಧ್ಯ? ಮಂಗಳೂರು ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ಮಂಗಳೂರು ಪೊಲೀಸರನ್ನು ಅಭಿನಂದಿಸಿದ್ದಾರೆ.
ಮಂಗಳೂರು ಪೊಲೀಸರ ಕಾರ್ಯಾಚರಣೆಯಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಿದೆ. ಡ್ರಗ್ಸ್ ವಿಚಾರದಲ್ಲಿ ಯಾರು ಸಿಕ್ಕರೂ ಬಿಡಲ್ಲ. ಡ್ರಗ್ಸ್ ಸೇವಿಸಿದವರು, ಪೆಡ್ಲರ್ ಗಳು ಎಲ್ಲರ ವಿರುದ್ಧವು ಕಾನೂನು ಕ್ರಮ ಜರುಗಿಸುತ್ತೇವೆ.ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಗೊತ್ತಿಲ್ಲಇನ್ನು ಕೂಡ ಬಹಳ ಜನ ಬಂಧಿತರಾಗಬಹುದು. ಬಂಧಿತರಲ್ಲಿ ಒಬ್ಬ ಅಮೆರಿಕನ್ ಪ್ರಜೆ ಕೂಡ ಇದ್ದಾನೆಐದಾರು ವರ್ಷಗಳಿಂದ ತೇರ್ಗಡೆ ಯಾಗದೆ ಇಲ್ಲೇ ಉಳಿದಿದ್ದಆತನನ್ನು ಕೂಡ ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.