ಮಂಗಳೂರು, ಜ 13 (DaijiworldNews/HR): ಸುರತ್ಕಲ್ ಬಸ್ ನಿಲ್ದಾಣ ಸನಿಹದಲ್ಲಿ ಮೂರು ವರ್ಷದ ಮಗುವೊಂದು ಸಾರ್ವಜನಿಕರಿಗೆ ಪತ್ತೆಯಾಗಿದ್ದು, ಇದೀಗ ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ.
ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಾಜರುಪಡಿಸಲಾಗಿದ್ದು, ಮಗುವನ್ನು ಕಳೆದುಕೊಂಡ ಪೋಷಕರು ಸುರತ್ಕಲ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಐಪಿಸಿ 317ರ ಅಡಿಯಲ್ಲಿ ಮಗು ಪೋಷಕರಿಂದ ಬೇರ್ಪಟ್ಟ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.