ಮಂಗಳೂರು, ಜ 10 (DaijiworldNews/HR): ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವಂಬರ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಸುರತ್ಕಲ್ ನ ಕುಮಾರಿ ರಮಾಶ್ರೀ ರಾವ್ ಅಖಿಲಭಾರತ ಶ್ರೇಣಿಯಲ್ಲಿ 2 ನೇ ರ್ಯಾಂಕ್ ಗಳಿಸಿದ್ದಾರೆ.
ಇವರು ಚಾರ್ಟಡ್ ಅಕೌಂಟೆನ್ಸಿಯ ಸಿ ಪಿ ಟಿ ಹಾಗೂ ಇಂಟರ್ ಮೀಡಿಯಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿದ್ದು, ಮಂಗಳೂರಿನ ಕಾಮತ್ ಆಂಡ್ ರಾವ್ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಪೂರೈಸಿರುತ್ತಾರೆ.
ಇವರು ಮಂಗಳೂರಿನ ಎಲ್ ಐ ಸಿ ಉದ್ಯೋಗಿಯಾದ ರಮೇಶ್ ರಾವ್ ಹಾಗೂ ನೇಷನಲ್ ಇನ್ಸೂರೆನ್ಸ್ ಕಂಪನಿ ಉದ್ಯೋಗಿಯಾದ ಮೀರಾ ಎಂ ದಂಪತಿಗಳ ಪುತ್ರಿಯಾಗಿರುತ್ತಾರೆ.