ಕಾರ್ಕಳ, ಜ 09 ( DaijiworldNews/SM): ಕಾರ್ಕಳ ಉತ್ಸವ ತಾಲೂಕಿನ ಜನತೆಯ ಉತ್ಸವವಾಗಿತ್ತು. ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಉತ್ಸವವಾಗಿ ನಡೆಸುತಿಲ್ಲ. ಪ್ರವಾಸಿ ಕ್ಷೇತ್ರವಾಗಿ ಕಾರ್ಕಳವನ್ನು ಹಲವು ಆಯಾಮಗಳಲ್ಲಿ ಹೇಗೆಲ್ಲ ಅಭಿವೃದ್ಧಿ ಪಡಿಸುವುದಕ್ಕೆ ಸಾಧ್ಯವೊ ಅದಕ್ಕೆ ಪೂರಕವಾಗಿ ಥೀಂ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಲೋಕಾರ್ಪಣೆಯನ್ನು ಉತ್ಸವವಾಗಿ ನಡೆಸದೆ ಅಭಿವೃದ್ಧಿಯ ಲೋಕಾರ್ಪಣೆ ಮಾದರಿಯಲ್ಲಿ ನಡೆಸುತ್ತಿದ್ದೇವೆ ಎಂದು ಇಂಧನ ಸಚಿವ ವಿ.ಸುನಿಲ್ಕುಮಾರ್ ಹೇಳಿದರು.
ಸೋಮವಾರ ವಿಕಾಸ ಕಚೇರಿಯಲ್ಲಿ ನಡೆದ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಕುರಿತ ಇಲಾಖೆ ಅಧಿಕಾರಿಗಳ ಜೊತೆಗಿನ ಹಾಗೂ ಉಪಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜ.11ರಿಂದ 13 ಈ ಮೂರು ದಿನಗಳ ಕಾರ್ಕಳ ನಗರ ವ್ಯಾಾಪ್ತಿ ಹಾಗೂ 7 ಗ್ರಾ.ಪಂ. ವ್ಯಾಪ್ತಿಯ ಗ್ರಾ.ಪಂಚಾಯತ್ ಗಳಲ್ಲಿ ಪೂರ್ವ ಸಿದ್ಧತೆಯ ಸಭೆ ನಡೆಸಲಾಗುವುದು. ಜ. 18ರಂದು ಥೀಂ ಪಾರ್ಕ್ ಕೆಳಗಡೆ ಕಾರ್ಯಾಲಯ ಉದ್ಘಾಟನೆ. ಜ 22ರಂದು ಬ್ರಹತ್ ಸ್ವಚ್ಛತೆ ಅಭಿಯಾನ ನಡೆಸುವುದು. 20ಮತ್ತು 21 ರಂದು ಆಮಂತ್ರಣ ಪತ್ರಿಕೆ ಆಹ್ವಾನ ಪತ್ರಿಕೆ ಹಂಚುವಿಕೆ ಅಭಿಯಾನ ನಡೆಸುವಂತೆ ಅವರು ಸೂಚಿಸಿದರು.
ಕಾರ್ಕಳ ತಹಶಿಲ್ದಾರ್ ಪ್ರದೀಪ ಕುರ್ಡೆಕರ್, ಹೆಬ್ರಿ ತಹಶಿಲ್ದಾಾರ್ ಪುರಂದರ ಕೆ. ತಾ.ಪಂ ಕಾರ್ಕಳ ಇಒ ಗುರುದತ್ತ್, ಹೆಬ್ರಿ ಇಒ ಶಶಿಧರ್, ಡಿವೈಎಸ್ಪಿ ವಿಜಯಪ್ರಸಾದ್, ಆರ್ ಒ ಪ್ರಭಾಕರ ಆರ್. ಕನ್ನಡ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಮಹಾವೀರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.