ಉಡುಪಿ, ಜ 08 (DaijiworldNews/HR): ರಾಜ್ಯದಲ್ಲಿಇತ್ತೀಚೆಗೆ ನಡೆದ 2023ರ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ನಂತರ ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿ ಪ್ರಕಾರ, ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಹಿಳಾ ಮತದಾರರಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಅತ್ಯಂತ ಕಡಿಮೆ ಮಹಿಳಾ ಮತದಾರರಿದ್ದಾರೆ ಎಂದು ರಾಜ್ಯ ಮುಖ್ಯಚುನಾವಣಾ ಆಯುಕ್ತರು ಟ್ವೀಟ್ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ರಾಜ್ಯದಲ್ಲಿಇತ್ತೀಚೆಗೆ ಮುಕ್ತಾಯಗೊಂಡ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ನಂತರ ರಾಜ್ಯದಲ್ಲಿಒಟ್ಟು 5,05,48,553 ಮತದಾರರಿದ್ದು, 2,54,49,725 ಪುರುಷ ಮತ್ತು 2,50,94,326 ಮಹಿಳಾ ಮತದಾರರಿದ್ದು, ಮಹಿಳೆಯರಿಗೆ ಹೋಲಿಸಿದರೆ ಪುರುಷ ಮತದಾರರು ಅಧಿಕವಾಗಿದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲಿನ ಒಟ್ಟು 10,06,245 ಮತದಾರರಲ್ಲಿ 4,90,060 ಪುರುಷರು ಮತ್ತು 5,26,173 ಮಹಿಳಾ ಮತದಾರರು ಮತ್ತು 12 ಲಿಂಗತ್ವಅಲ್ಪ ಸಂಖ್ಯಾತರಿದ್ದಾರೆ.
ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಪರಿಶೀಲಿಸಿದ್ದಲ್ಲಿ, ಬೈಂದೂರಿನ ಒಟ್ಟು, 2,29,550 ಮತದಾರರಲ್ಲಿ 1,12,126 ಪುರುಷರು ಮತ್ತು 1,17,421 ಮಹಿಳಾ ಮತದಾರರು, ಕುಂದಾಪುರದ ಒಟ್ಟು, 2,04,525 ಮತದಾರರಲ್ಲಿ 98,224 ಪುರುಷರು ಮತ್ತು 1,06,298 ಮಹಿಳಾ ಮತದಾರರು, ಉಡುಪಿಯಒಟ್ಟು 2,11,631 ಮತದಾರರಲ್ಲಿ 1,02,192 ಪುರುಷರು ಮತ್ತು 1,09,439 ಮಹಿಳಾ ಮತದಾರರು, ಕಾಪು ವಿನಒಟ್ಟು 1,84,088 ಮತದಾರರಲ್ಲಿ 88,114 ಪುರುಷರು ಮತ್ತು95,968 ಮಹಿಳಾ ಮತದಾರರು, ಕಾರ್ಕಳದ ಒಟ್ಟು 1,86,451 ಮತದಾರರಲ್ಲಿ89,404 ಪುರುಷರು ಮತ್ತು 97,047 ಮಹಿಳಾ ಮತದಾರರಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಅಧಿಕವಾಗಿದೆ.
ಜಿಲ್ಲೆಯಲ್ಲಿಇತ್ತೀಚೆಗೆ ನಡೆದ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆಅವಧಿಯಲ್ಲಿ 13816 ಯುವ ಮತದಾರರು ನೊಂದಣಿಯಾಗಿದ್ದು,ಇದರಲ್ಲೂ ಸಹ ಯುವತಿಯರ ನೊಂದಣಿಸಂಖ್ಯೆ ಅಧಿಕವಾಗಿದೆ.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಅವಧಿಯಲ್ಲಿಯುವ ಮತದಾರರ ಸೇರ್ಪಡೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ವಿಶೇಷ ನೊಂದಣಿ ಆಭಿಯಾನ ನಡೆಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ನೊಂದಣಿ ಮತ್ತು ತಿದ್ದುಪಡಿಗೆ ಅರ್ಜಿಗಳನ್ನು ಸಲ್ಲಿಸಿದ್ದು, ಎಲ್ಲಾ ಅರ್ಜಿಗಳನ್ನು ಯಾವುದೇ ಆಕ್ಷೇಪಗಳಿಗೆ ಅವಕಾಶವಿಲ್ಲದಂತೆ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇರುವುದರಿಂದ ಜಿಲ್ಲೆಯು ರಾಜ್ಯಕ್ಕೇ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.