ಉಡುಪಿ, ಜ 07 (DaijiworldNews/DB): ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಡೀಸೆಲ್ ಟ್ಯಾಂಕರ್ವೊಂದು ಪಾದಚಾರಿ ಕಾಲಿನ ಮೇಲೆ ಹರಿದು ವ್ಯಕ್ತಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಬೊನ್ನಾ ಪೂಜಾಪಲ್ಲಿ (36) ಗಾಯಗೊಂಡ ವ್ಯಕ್ತಿ. ಟ್ಯಾಂಕರ್ನ ಚಕ್ರಗಳು ಆತನ ಪಾದಗಳ ಮೇಲೆ ಹರಿದಿದ್ದರಿಂದ ಪಾದದ ಎಲುಬುಗಳು ಮುರಿದಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.