ಕಾಸರಗೋಡು, ಜ 07( DaijiworldNews/MS) : ವಿಷಾಹಾರ ಸೇವನೆಯಿಂದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಪೆರುಂಬಳ ಬೇನೂರಿನಲ್ಲಿ ನಡೆದಿದೆ.
ಬೇನೂರು ತಲಕ್ಲಾಯಿಯ ಅಂಜುಶ್ರಿ ಪಾರ್ವತಿ ( 19) ಮೃತಪಟ್ಟ ವಿದ್ಯಾರ್ಥಿನಿ . ಹೋಟೆಲ್ ನಿಂದ ತರಿಸಿದ್ದ ಆಹಾರ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಈಕೆಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿ .ಕಾಂ ವಿದ್ಯಾರ್ಥಿನಿಯಾಗಿದ್ದಳು . ಆರು ದಿನಗಳ ಹಿಂದೆ ಹೋಟೆಲೊಂದರಿಂದ ಆನ್ ಲೈನ್ ಮೂಲಕ ಖರೀದಿಸಿದ್ದ ಆಹಾರವನ್ನು ಸೇವಿಸಿದ್ದು, ಬಳಿಕ ಅಸ್ವಸ್ಥ ಗೊಂಡಿದ್ದರು ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು .
ಹೊಸವರ್ಷದ ಹಿನ್ನಲೆಯಲ್ಲಿ ಹೋಟೆಲ್ ನಿಂದ ಆನ್ ಲೈನ್ ಮೂಲಕ ಆಹಾರ ಖರೀದಿಸಿ ಕುಟುಂಬದವರ ಜೊತೆ ಸೇವಿಸಿದ್ದು ಆಹಾರ ಸೇವಿಸಿದ್ದ ಎಲ್ಲರಲ್ಲಿ ಅಸ್ವಸ್ಥತೆ ಕಂಡುಬಂದಿತ್ತು . ಆದರೆ ಅಂಜುಶ್ರಿ ತೀವ್ರ ಅಸ್ವಸ್ಥತೆ ಗೊಂಡ ಹಿನ್ನಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು . ಆದರೆ ಸ್ಥಿತಿ ಗಂಭೀರವಾದುರಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು . ,ಮೇಲ್ಪರಂಬ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ . ಆಹಾರವನ್ನು ನಗರ ಹೊರವಲಯದ ಅಡ್ಕತ್ತಬೈಲ್ ನ ಹೋಟೆಲೊಂದರಿಂದ ಖರೀದಿಸಿದ್ದಳು .
ವರದಿ ಕೇಳಿದ ಆರೋಗ್ಯ ಸಚಿವೆ:
ವಿಷಹಾರ ಸೇವನೆ ಯಿಂದ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಸಮಗ್ರ ತನಿಖೆಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶ ನೀಡಿದ್ದಾರೆ . ಈ ಕುರಿತು ತುರ್ತು ವರದಿ ನೀಡುವಂತೆ ಆಹಾರ ಸುರಕ್ಷಾ ಆಯುಕ್ತರಿಗೆ ಆದೇಶ ನೀಡಿದ್ದಾರೆ ಜಿಲ್ಲಾ ವೈದ್ಯಾಧಿಕಾರಿಯವರಿಂದ ಸಚಿವರು ವರದಿ ನೀಡುವಂತೆ ಆದೇಶಿದ್ದಾರೆ.