ಕಾಸರಗೋಡು, ಜ 06 ( DaijiworldNews/MS): ಮೈಸೂರಿನಿಂದ ಕೇರಳಕ್ಕೆ ಪ್ರವಾಸಕ್ಕೆ ಹೊರಟಿದ್ದ ಬಸ್ಸೊಂದು ಪನತ್ತಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ ಬಿದ್ದ ಪರಿಣಾಮ 40ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.
20 ಮಂದಿಯನ್ನು ಪೂಡಂಕಲ್ಲು ತಾಲೂಕು ಆಸ್ಪತ್ರೆ ಹಾಗೂ 10 ಮಂದಿಯನ್ನು ಕಾ ಞ೦ಗಾಡ್ ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನ ಸಿಬಂದಿಗಳು ಪ್ರಯಾಣಿಸುತ್ತಿದ್ದ ಬಸ್ಸು ಈ ಅಪಘಾತಕ್ಕೀಡಾಗಿದೆ . ಬಸ್ಸಿನಲ್ಲಿ 49ಮಂದಿ ಇದ್ದರೆನ್ನಲಾಗಿದೆ.
ಬಸ್ಸಿನಲ್ಲಿ ಸಿಲುಕಿದವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಬೆಳಿಗ್ಗೆ ಪ್ರವಾಸಿ ಕೇಂದ್ರವಾದ ರಾಣಿಪುರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ.