ಉಡುಪಿ, ಜ 06 ( DaijiworldNews/MS): "ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಚರ್ಚೆಗೆ ಬರುವುದಾದರೆ ದಿನಾಂಕ ಮತ್ತು ಸ್ಥಳ ನಿಗದಿ ಮಾಡಿ ತಿಳಿಸಲಿ, ಅದು ಬಿಟ್ಟು ಚುನಾವಣೆ ಸಂಧರ್ಭದಲ್ಲಿ ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವುದಕ್ಕೆ ಅವಕಾಶ ಕೊಡದೇ ಕಾಪುವಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾಲದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ, ಅಭಿವೃದ್ದಿ ಆಗಿದೆ ಎಂಬುವುದಕ್ಕೆ ಬಹಿರಂಗ ಚರ್ಚೆಗೆ ಸೊರಕೆಯವರು ಎಲ್ಲಿ ಕರೆಯುತ್ತಾರೋ ಅಲ್ಲಿ ಪಟ್ಟಿ ತೆಗೆದುಕೊಂಡು ಬರುತ್ತೇನೆ” ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ್ಯ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ವಿನಯ್ ಕುಮಾರ್ ಸೊರಕೆಯವರ ಆರೋಪಗಳಿಗೆ ಉತ್ತರ ನೀಡಿ ಮಾತನಾಡಿದ ಅವರು “ಸೊರಕೆಯವರು 75 ವರ್ಷದ ಪಟ್ಟಿ ತೆಗೆದುಕೊಂಡು ಬರಲಿ, ನಾನು ಕಳೆದ 10 ವರ್ಷದ್ದು ಮತ್ತು ಈ ಸರಕಾರದ 5 ವರ್ಷದ ಪಟ್ಟಿ ತೆಗೆದುಕೊಂಡು ಬರುತ್ತೇನೆ. ಸೊರಕೆಯವರು ಪ್ರಬುದ್ದ ರಿದ್ದಾರೆ. ಅವರು ಕೊಂದಂತದ ಲೋಕಾಯುಕ್ತವನ್ನು ನಾವು ಒಪನ್ ಮಾಡಿದ್ದೇವೆ. ಸೊರಕೆಯವರು ಪ್ರಾಮಾಣಿರಾಗಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಿ. ಇಲ್ಲದಿದ್ದಲ್ಲಿ ಸೊರಕೆಯವರಿಗೆ ಅಂತಹ ಕೆಲಸ ಮಾಡಿ ಅಭ್ಯಾಸ ಇದೆ ಎಂದು ಲೆಕ್ಕ. 40% ಎಂದು ಬೆಂಗಳೂರು ಗುತ್ತಿಗೆದಾರರ ಸಂಘದ ಅಧ್ಯಕ್ಷ್ಯರು ಹೇಳುತ್ತಿದ್ದಾರೆ, ಈ ರಾಜ್ಯದಲ್ಲಿ ಲೋಕಾಯುಕ್ತ ಇದೆ ದೂರು ನೀಡಲಿ,. ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಅದೇ ಕೆಲಸವನ್ನು ಉಡುಪಿಯಲ್ಲಿ ಸೊರಕೆಯವರು ಮಾಡುತ್ತಿದ್ದಾರೆ. ನೀವು 35 ಲಕ್ಷದ ಕಾಮಗಾರಿಗೆ 1 ಕೋಟಿ ರುಪಾಯಿ ಎಸ್ಟೆಮೇಟ್ ಅಗಿದೆ ಎಂದಿದ್ದೀರಿ, ಅದರ ದಾಖಲೆಯನ್ನು ತೆಗೆಯಿರಿ, ಲೋಕಾಯುಕ್ತಕ್ಕೆ ದೂರು ನೀಡಿ. ಅಭಿವೃದ್ದಿ ವಿಷಯದಲ್ಲಿ ಚರ್ಚೆಗೆ ಬರುವುದಾದರೆ ಕಳೆದ 5 ವರ್ಷದ ನಮ್ಮ ಅಭಿವೃದ್ದಿ ಅದಕ್ಕಿಂತ ಹಿಂದಿನ ಸೊರಕೆಯವರ ಮತ್ತು ಸಿದ್ದರಾಮಯ್ಯ ನವರ ಅಭಿವೃದ್ದಿ ಿದರ ಕುರಿತು ಬಹಿರಂಗ ಚರ್ಚೆಗೆ ಬರಬೇಕು. ಸೊರಕೆಯವರು 100 ಶೇಕಡಾ ಕಾಪುವಿನಲ್ಲಿ ಈ ಬಾರಿ ಗೆಲ್ಲುವುದಿಲ್ಲ” ಎಂದರು.
“ಕಾಪುವಿನಲ್ಲಿ ಯಾರೆಲ್ಲಾ ದನಕಳ್ಳತನ ಮಾಡಿದ್ದಾರೆ ಅವರೆಲ್ಲಾ ಸೊರಕೆಯವರ ಕಾರ್ಯಕರ್ತರು. ಅವರನ್ನು ಬಿಡಿಸುವುದು ಇವರೇ,. ಅವರೆಲ್ಲಾ ಸೊರಕೆಯವರ ಹಿಂಬಾಲಕರೇ, ಪೋಲಿಸಿನವರು ತುಂಬಾ ಹೇಳುತ್ತಾರೆ, ಯಾವ ಪೋಲಿಸ್ ಎಂದು ಸೊರಕೆ ಹೇಳಲಿ, ಚರ್ಚೆಗೆ ಬರಲಿ,. ಗೆಲ್ಲಲು 150 ತಂತ್ರ ಇದೆ. ಇದು ಅಡ್ಡದಾರಿ ಹಿಡಿಯುವುದು ಬೇಡ” ಎಂದು ಕುಯಿಲಾಡಿ ಸುರೇಶ್ ನಾಯಕ್ ಕಿಡಿ ಕಾರಿದ್ದಾರೆ.