ಬಂಟ್ವಾಳ, ಜ 06 (DaijiworldNews/SM): ಕಳೆದ ಐದಿನೈದು ದಿನಗಳಿಂದ ಜಲ್ಲಿ ಕ್ರಷರ್ ಬಂದ್, ಕಟ್ಟಡ ಸಹಿತ ಇತರ ಕಾಮಗಾರಿ ಸ್ಥಗಿತ, ಅತ್ರಂತ್ರದಲ್ಲಿ ಕಾರ್ಮಿಕರು. ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ತರುವಂತೆ ಆಗ್ರಹಿಸಿ ರಾಜ್ಯದೆಲ್ಲೆಡೆ ಕ್ರಷರ್ ಘಟಕಗಳ ಚಟುವಟಿಕೆ ಸ್ಥಗಿತಗೊಳಿಸಿವೆ ಹೋರಾಟ ನಡೆಸುತ್ತಿದೆ.
ಕಳೆದ ಕೆಲ ತಿಂಗಳಿನಿಂದ ಮರಳು ಸಮಸ್ಯೆಯಿಂದ ತತ್ತರಿಸಿ ಹೋಗಿದ್ದ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಇದೀಗ ಜಲ್ಲಿ ಕೊರತೆಯ ನೇರ ಪರಿಣಾಮ ಇತರೆಲ್ಲ ಕ್ಷೇತ್ರಗಳ ಮಾರಾಟಗಾರ ಮೇಲಾಗಿದ್ದು, ಉದ್ಯಮ ಕೋಟ್ಯಂತರ ರೂ. ನಷ್ಟದ ಜತೆಗೆ ಲಕ್ಷಾಂತರ ಕಾರ್ಮಿಕರು ಅತಂತ್ರರಾಗಿದ್ದಾರೆ. ಜಲ್ಲಿ, ಎಂಸ್ಯಾಂಡ್ ಕೊರತೆಯ ನೇರ ಪರಿಣಾಮ ಹೋಲೋಬ್ಲಾಕ್, ಇಂಟರ್ಲಾಕ್ ನಿರ್ಮಾಣ ಘಟಕಗಳು, ಸಿಮೆಂಟ್, ಕಬ್ಬಿಣ ಖರೀದಿ, ವಿದ್ಯುತ್, ಕಲ್ಲು, ಮರಳು, ಬಡಗಿ, ಗಾರೆ, ಕೂಲಿ ಕಾರ್ಮಿಕರು ಹೀಗೆ ಎಲ್ಲ ಕ್ಷೇತ್ರಗಳ ಮತ್ತು ಜನರ ಮೇಲಾಗುತ್ತಿದೆ. ಬಡವರ ಕನಸಿನ ಮನೆ ಸೇರಿದಂತೆ ವಿವಿಧ ಯೋಜನೆಗಳ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಆರ್ಥಿಕ ವರ್ಷಾಂತ್ಯ ಮಾರ್ಚ್ನೊಳಗೆ ಪೂರ್ಣಗೊಳಿಸಬೇಕಿರುವ ರಸ್ತೆ ಇನ್ನಿತರ ಕಾಮಗಾರಿಗಳಿಗೂ ಹಿನ್ನಡೆ ಯಾಗಿದೆ ಎಂಬ ಅಳಲು ಗುತ್ತಿಗೆದಾರರದ್ದು.
ಚುನಾವಣೆ ಸಮೀಪದ ಅವಧಿಯಲ್ಲಿ ಸರಕಾರದ ಯೋಜನೆಗಳ ಕಾಮಗಾರಿ ಸಹಿತ ಖಾಸಗಿ ಕಾಮಗಾರಿಗಳಿಗೆ , ಕ್ರಷರ್ ಘಟಕ ಸ್ಥಗಿತಗೊಂಡಿದ್ದು, ಬಹಳಷ್ಟು ಸಂಕಷ್ಟಕ್ಕೆ ಗುರಿಯಾಗಿಸಿದೆ. ಶೀಘ್ರವಾಗಿ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒತ್ತುನೀಡಬೇಕು ಎಂಬುದು ಸಾರ್ವಜನಿಕ ಆಗ್ರಹ.