ಕುಂದಾಪುರ, ಜ 06 (DaijiworldNews/SM): ದೇಶದಲ್ಲಿ ಹಿಂದೂಗಳ ಮತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಮರವಂತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿನಯ್ ಕುರೂಜಿ ಪ್ರತಿಕ್ರಿಯೆ ನೀಡಿದ್ದಾರೆ.
ಮತಾಂತರ ಆಗಲು ಹಿಂದೂಗಳೇ ಪ್ರಮುಖ ಕಾರಣರಾಗಿದ್ದಾರೆ. ಪ್ರಮುಖವಾಗಿ ಎರಡು ಕಾರಣದಿಂದ ಮತಾಂತರ ಆಗುತ್ತಿದೆ. ಒಂದು ನಮ್ಮೊಳಗಿನ ಮೇಲು ಕೀಳು, ಮತ್ತೊಂದು ಬಡತನ ಎಂದು ಅವರು ಹೇಳಿದ್ದಾರೆ.
ಯಾರೋ ಒಬ್ಬರನ್ನು ದೇವಸ್ಥಾನದಿಂದ ಹೊರ ತಳ್ಳಿದಾಗ ಆತನಿಗೆ ಇನ್ನೊಂದು ಧರ್ಮ ಸ್ವಾಗತಿಸುತ್ತದೆ. ಮತ್ತೊಂದು ಧರ್ಮದಲ್ಲಿ ಸಹಜವಾಗಿಯೇ ಆತನಿಗೆ ಸಮಾನತೆ ಸಿಗುತ್ತದೆ. ಇದರಲ್ಲಿ ಅವರ ಇವರ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಧರ್ಮದಲ್ಲಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಬಡತನದಿಂದ ದೂರವಿದ್ದಾಗ ಸಮಸ್ಯೆ ಪರಿಹಾರವಾಗಲಿದೆ ಎಂದು ವಿನಯ್ ಗುರೂಜಿಯವರು ಹೇಳಿದ್ದಾರೆ.