ಕಾಸರಗೋಡು, ಜ 06 (DaijiworldNews/DB): ಕಂಟೈನರ್ ಲಾರಿಯೊಂದು ರಸ್ತೆ ಮಧ್ಯದಲ್ಲೇ ಸಿಲುಕಿದ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ನಡೆದಿದೆ.
ಬಂದ್ಯೋಡಿನ ಅಂಗಡಿಯೊಂದಕ್ಕೆ ಸಾಮಾಗ್ರಿ ಇಳಿಸಿ ರಾಷ್ಟ್ರೀಯ ಹೆದ್ದಾರಿಗೆ ತೆರಳುತ್ತಿದ್ದಾಗ ರಸ್ತೆ ಬದಿ ಹಾಕಲಾಗಿದ್ದ ಮಣ್ಣಿನ ರಾಶಿಯಲ್ಲಿ ಲಾರಿ ಅಡ್ಡವಾಗಿ ರಸ್ತೆಯಲ್ಲೇ ಸಿಲುಕಿತ್ತು.
ಇದರಿಂದಾಗಿ ಎರಡೂವರೆ ಗಂಟೆಗೂ ಅಧಿಕ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕ್ರೇನ್ ಮತ್ತು ಜೆಸಿಬಿ ಬಳಸಿ ಕಂಟೈನರ್ನ್ನು ತೆರವು ಗೊಳಿಸಲಾಯಿತು.