ಕಾರ್ಕಳ,ಮಾ 09(MSP): ಮೂಂಡ್ಕೂರು ಗ್ರಾಮದ ಪೊಸ್ರಾಲು ಎಂಬಲ್ಲಿರುವ ಶಾಂಭವಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಂಗ್ರಹಿಸಿ ಟಿಪ್ಪರ್ಗಳಿಗೆ ಲೋಡಿಮಾಡಿ ಮಾರಾಟ ಮಾಡಲಾಗುತ್ತಿದ್ದ ಪ್ರಕರಣವನ್ನು ಎಎಸ್ಪಿ ಕೃಷ್ಣಕಾಂತ್ ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಶೆಟ್ಟಿ, ಮಂಜುನಾಥ ಪೂಜಾರಿ, ವಿಲ್ಫೆಡ್ ಮಸ್ಕರೇನಸ್, ಭೀಮಪ್ಪ, ಮರಿಯಪ್ಪ, ವಾಲ್ಟರ್, ಲಕ್ಷಣ್ ಬಂಧಿತರು. ಇನ್ನಾ ದೀಪಕ್ ಕೋಟ್ಯಾನ್ ತಲೆಮರೆಸಿಕೊಂಡ ಆರೋಪಿ. ಖಚಿತವಾದ ವರ್ತಮಾನದ ಮೇರೆಗೆ ಶುಕ್ರವಾರ ನಸುಕಿನ ಜಾವದಲ್ಲಿ ಈ ಕಾರ್ಯಚರಣೆ ನಡೆಸಲಾಗಿದೆ. ಘಟನಾ ಸ್ಥಳದಿಂದ 5 ಟಿಪ್ಪರ್ಗಳನ್ನು, ಒಂದು ಮೋಟಾರ್ ಸೈಕಲ್, ತೂತುಗಳಿರುವ 10 ಕಬ್ಬಿಣದ ಬಾಲ್ದಿಗಳು, 5 ಹಾರೆಗಳು, 20 ಪ್ಲಾಸ್ಟಿಕ್ ಬುಟ್ಟಿಗಳು,4 ಕಬ್ಬಿಣದ ಸ್ಟಾಂಡ್ಗಳು, 6 ಮರದ ಬೋಟುಗಳನ್ನು ಸ್ವಾಧೀನ ಪಡಿಸಲಾಗಿದೆ. ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಮೂರನೇ ಆರೋಪಿ ಇನ್ನಾ ದೀಪಕ್ ಕೋಟ್ಯಾನ್ ಪರಾರಿಯಾಗಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 79,75,000 ಆಗಿರುತ್ತದೆ.