ಮಂಗಳೂರು, ಜ 04 ( DaijiworldNews/MS): 'ಉಳ್ಳಾಲದಿಂದ ಸ್ಪರ್ಧಿಸಲು ನಾನೇನು ಅಲೆಮಾರಿ ರಾಜಕಾರಣಿಯೇ' ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಹೇಳಿದ್ದಾರೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಅಲೆಮಾರಿ ರಾಜಕಾರಣಿಯೇ? ಹಲವು ಕ್ಷೇತ್ರದಲ್ಲಿ ಅಭಿಮಾನಿಗಳು ಕರೆಯುತ್ತಿದ್ದಾರೆ ನಿಜ. ವರುಣಾದಲ್ಲಿ ನನ್ನ ಮಗ ಮತ್ತು ಕಾರ್ಯಕರ್ತರು ಸ್ಪರ್ಧಿಸಲು ಹೇಳಿದ್ದಾರೆ. ಬಾದಾಮಿಯಲ್ಲೇ ಸ್ಪರ್ಧಿಸಲು ಜನ ಬಲವಂತ ಮಾಡುತ್ತಿದ್ದಾರೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಯಿ ಮರಿ ಹೇಳಿಕೆ ಕುರಿತು ಸ್ಪಷ್ಟಪಡಿಸಿದ ಅವರು, ನಾನು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನಾಯಿ ಮರಿ ಎಂದು ಕರೆದಿಲ್ಲ. ನಾಯಿ ಮರಿ ತರ ಇರಬಾರದು ಅಷ್ಟೇ ಅಂದಿದ್ದೆ. ಯಡಿಯೂರಪ್ಪ ಅವರಿಗೆ ರಾಜಾ ಹುಲಿ ಅಂತ ಬಿಜೆಪಿಯವರೇ ಕರಿತಾರೇ ಹಾಗೆಂದು ಅವರೇನು ಹುಲಿನಾ?ಕೇಂದ್ರ ಸರ್ಕಾರದಿಂದ ಅನುದಾನ ತರುವಲ್ಲಿ ಅವರು ಧೈರ್ಯ ತೋರಬೇಕು.ನಾಯಿ ಮರಿ ತರ ಇರಬಾರದು ಅಂತ ಹೇಳಿದ್ದೆ ಅಷ್ಟೇ ಎಂದು ಹೇಳಿದ್ದಾರೆ.