ಬಂಟ್ವಾಳ, ಜ. 04 ( DaijiworldNews/SM): ಪಾಣೆಮಂಗಳೂರು ಹಳೆಯ ಸೇತುವೆ ಬಳಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾದ ಜಮೀನಿನ ಒತ್ತುವರಿ ನಡೆದಿದೆ ಎಂಬ ದೂರಿನ ಹಿನ್ನೆಲೆ, ಜಾಗದ ಗುರುತಿಗಾಗಿ ಸರ್ವೇ ಕಾರ್ಯ ಬುಧವಾರ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ.
ಪಾಣೆಮಂಗಳೂರು ಹಳೆಯ ಸೇತುವೆ ಬಳಿ ಹಳೆಯದಾದ ಪಶುಸಂಗೋಪನೆ ಇಲಾಖೆ ಕಾರ್ಯಚರಿಸುತ್ತಿದ್ದ ಹಂಚಿನಛಾವಣಿ ಹೊಂದಿರುವ ಕಟ್ಟಡ ಸಮೇತ ಸುಮಾರು 38 ಸೆಂಟ್ಸ್ ಜಾಗವನ್ನು ನಿವೇಶನ ರಹಿತ ಟ್ರಾಫಿಕ್ ಪೊಲೀಸ್ ಠಾಣೆಗೆ ಕಟ್ಟಡ ನಿರ್ಮಾಣಕ್ಕೆ ಸರಕಾರ ಮಂಜೂರು ಮಾಡಿತ್ತು.
ಮಂಜೂರಾತಿ ಆಗಿ ಮೂರು ವರ್ಷ ಕಳೆದರು ಈ ಜಾಗದಲ್ಲಿ ಕಟ್ಟಡ ನಿರ್ಮಾಣ ವಾಗಲಿಲ್ಲ. ಟ್ರಾಪಿಕ್ ಪೊಲೀಸ್ ಠಾಣೆ ನಿರ್ಮಾಣಕ್ಕೆ ಜಾಗ ಮಂಜೂರುಗೊಂಡ ಬಳಿಕ ಹೌಸಿಂಗ್ ಬೋರ್ಡ್ ನವರು ಬಂದು ಜಮೀನಿನ ವಿಸ್ತೀರ್ಣ ನೋಡಿದಾಗ ಇಲ್ಲಿ 23 ಸೆಂಟ್ಸ್ ಜಾಗ ಮಾತ್ರ ಇರುವ ಬಗ್ಗೆ ಖಾತ್ರಿಯಾಯಿತು. ಅ ಕಾರಣಕ್ಕಾಗಿ ಹೌಸಿಂಗ್ ಬೋರ್ಡ್ ನವರು ಇಲ್ಲಿ ಸಾಕಷ್ಟು ಜಾಗದ ಕೊರತೆ ಯಿರುವ ಕಾರಣ ಕಟ್ಟಡ ನಿರ್ಮಾಣ ಅಸಾಧ್ಯ ಎಂದು ತಿಳಿಸಿದ್ದಾರೆ.
ಸರಕಾರ ಟ್ರಾಪಿಕ್ ಪೊಲೀಸ್ ಠಾಣೆಗೆಂದು ಮಂಜೂರು ಮಾಡಿದ ಜೊತೆಗೆ ಪಶುಸಂಗೋಪನೆ ಇಲಾಖೆಯ ಹೆಸರಿನಲ್ಲಿ ಇದ್ದ 38 ಸೆಂಟ್ಸ್ ಜಾಗದ ಬದಲಾಗಿ ಪ್ರಸ್ತುತ ಕೇವಲ 23 ಸೆಂಟ್ಸ್ ಬಾಕಿ ಉಳಿದಿದ್ದು 15 ಸೆಂಟ್ಸ್ ಜಾಗವನ್ನು ಅಲ್ಲಿನ ಸ್ಥಳೀಯ ರು ಒತ್ತುವರಿ ಮಾಡಿ ಅ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಂದಾಯ ಇಲಾಖೆಗೆ ದೂರು ನೀಡಿ ಜಾಗ ಅಳತೆ ಮಾಡಿಕೊಡುವಂತೆ ಮಾಡಿಕೊಡುವಂತೆ ಕೇಳಿದ್ದರು.
ಪೊಲೀಸ್ ಇಲಾಖೆಯ ಮನವಿಯಂತೆ ಕಂದಾಯ ಇಲಾಖೆ ಸರ್ವೇ ಇಲಾಖೆಯ ಸಿಬ್ಬಂದಿಗಳನ್ನು ಜಮೀನಿನ ಸರ್ವೇ ಕಾರ್ಯಕ್ಕಾಗಿ ಇಂದು ಕಳುಹಿಸಲಾಗಿದೆ.
ಸರ್ವೇ ಸಂದರ್ಭದಲ್ಲಿ 15 ಸೆಂಟ್ಸ್ ಜಾಗವನ್ನು ಒತ್ತುವರಿ ಮಾಡಿದ ಬಗ್ಗೆ ಗಮನಕ್ಕೆ ಬಂದಿದ್ದು, ಪೊಲೀಸ್ ಸ್ಟೇಷನ್ ಗೆ ಸೇರಿದ ಜಾಗವನ್ನು ಮತ್ತೆ ಇಲಾಖೆಗೆ ಬಿಟ್ಟುಕೊಡುವಂತೆ ತಹಶಿಲ್ದಾರರ ಮೂಲಕ ಮನವಿ ಮಾಡಿದ್ದಾರೆ.
ಒತ್ತುವರಿ ಮಾಡಿರುವ ಜಾಗದಲ್ಲಿ ಅಲ್ಲಿನ ನಿವಾಸಿಗಳು ಮನೆನಿರ್ಮಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸರ್ವೇ ಕಾರ್ಯದ ಸಂದರ್ಭದಲ್ಲಿ ಟ್ರಾಫಿಕ್ ಎಸ್.ಐ.ಮೂರ್ತಿ,ಎ.ಎಸ್.ಗಳಾದ ವಿಜಯ, ಸುರೇಶ್ ಪಡಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.