ಉಡುಪಿ, ಮಾ 08(SM): ಸುಮಲತಾ ಬಗ್ಗೆ ರೇವಣ್ಣ ನೀಡಿರುವ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕೂಡ ರೇವಣ ಹೇಳಿಕೆಯನ್ನು ಖಂಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿದಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದ ಸೂಪರ್ ಸಿಎಂ ಹೀಗೆ ಹೇಳಬಾರದಿತ್ತು ಎಂದು ರೇವಣ್ಣ ಅವರನ್ನು ಕೆಣಕಿದ್ದಾರೆ.
ಸಚಿವ ರೇವಣ್ಣ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆದರೆ, ಸುಮಲತಾ ಬಗ್ಗೆ ಮನಸೋ ಇಚ್ಛೆ ಮಾತನಾಡಿದ್ದಾರೆ. ಮಹಿಳಾ ದಿನಾಚರಣೆಯಂದೇ ಸಹೋದರಿಯನ್ನು ಅವಮಾನಿಸಿದ್ದಾರೆ. ರೇವಣ್ಣ ಅವರಿಂದ ಇಂತಹ ಭಾಷೆ ಊಹಿಸಲೂ ಕೂಡ ಅಸಾಧ್ಯ ಎಂದ ಅವರು, ಸುಮಲತಾ ಬಗ್ಗೆ ಆಡಿದ ಮಾತು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.