ಯುವ ನಿರ್ದೇಶಕರಾದ ಕೃಷ್ಣ ಪ್ರಸಾದ್ ಉಪ್ಪಿನಕೋಟೆ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ರಂಗ್ ರಂಗ್ ದ ದಿಬ್ಬಣ ನಾಳೆ ಅಂದರೆ ನವೆಂಬರ್ 3 ರಂದು ಕರಾವಳಿ ಸಿನಿಮಾ ಮಂದಿರಕ್ಕೆ ಭರ್ಜರಿ ಎಂಟ್ರಿ ಕೊಡಲು ತಯಾರಾಗಿದೆ. ವಾರಿನ್ ಕಂಬೈನ್ಸ್ ನಲ್ಲಿ, ಶರತ್ ಕೋಟ್ಯಾನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಯು/ಎ ಸರ್ಟೀಫಿಕೇಟ್ ಸಿಕ್ಕಿದೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಕರಾವಳಿಯ ಪ್ರತಿಭಾವಂತ ಯುವಕರೇ ನಿರ್ಮಿಸಿದ ಸಿನಿಮಾ ಇದಾಗಿದೆ. ಕಾಲೇಜು ಹುಡುಗರು ಪ್ರೀತಿ ಪ್ರೇಮದ ಬಲೆಗೆ ಬಿದ್ದು ನಡೆಯುವ ಅವಾಂತರಗಳು, ಹೆತ್ತವರ ಸಂಕಟ ಹಾಗೂ ಡ್ರಗ್ಸ್ ಜಾಲದ ವಿರುದ್ದ ಸಂದೇಶ ನೀಡುವ ಪ್ರಮುಖ ಕಥಾ ವಸ್ತುವನ್ನು ಒಳಗೊಂಡಿದೆ. ಚಿತ್ರವು ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾಸ್ , ಪಿವಿಆರ್ ಸಿನಿಪೊಲೀಸ್ ಮುಂತಾದ ಕಡೆಗಳಲ್ಲಿ ಬಿಡುಗಡೆಗೊಳ್ಳಲಿದೆ
ಚಿತ್ರದಲ್ಲಿ ನಾಯಕ ನಟರಾಗಿ ರವಿರಾಜ್ ಶೆಟ್ಟಿ, ಹಾಗೂ ಪ್ರಶಾಂತ್ ಸಾಮಗ ಇದ್ರೆ ಇವರಿಗೆ ನಾಯಕಿಯರಾಗಿ ಸ್ವಾತಿ ಬಂಗೇರಾ, ಮತ್ತು ಸಂಹಿತಾ ಶಾ, ತೆರೆ ಮೇಲೆಮಿಂಚಲಿದ್ದಾರೆ. ಇನ್ನು ಸಂಹಿತಾ ಶಾ ಈ ಚಿತ್ರದಲ್ಲಿ ಬುಲೆಟ್ ಓಡಿಸಿ ಸಿ ಟೌನ್ ನಲ್ಲಿ ಬುಲೆಟ್ ರಾಣಿ ಎಂದು ಕರೆಸಿಕೊಂಡಿದ್ದಾರೆ. ಉಳಿದಂತೆ ಪ್ರಮುಖ ಭೂಮಿಕೆಯಲ್ಲಿ ಉಮೇಶ್ ಮಿಜಾರು , ರಾಘವೇಂದ್ರ ರೈ, ದಿನೇಶ ಅತ್ತಾವರ್ , ರಂಜನ್ ಬೋಳೂರು, ಆರ್.ಜೆ ರೂಪೇಶ್, ರಘು ಪಾಂಡೇಶ್ವರ ಮುಂತಾದವರಿದ್ದಾರೆ. ಚೆಲುವಿನ ಚಿತ್ತಾರದ ಛಾಯಗ್ರಹಕ ರೇಣು ಕುಮಾರ್ ಅವರ ಛಾಯಗ್ರಹಣವಿದ್ದರೆ , ಚಿತ್ರಕ್ಕೆ ಸುಧೀರ್ ಅತ್ತಾವರ, ವಿಜಯ ಕುಮಾರ್ ಕೋಡಿಯಾಲ್ ಬೈಲ್, ಸಲೀಂ ಪುತ್ತೂರು ಅವರ ಸಾಹಿತ್ಯವಿದೆ. ಇನ್ನು ರಂಜಿತ್ ಸುವರ್ಣ ಹಾಗೂ ಕಿಶೋರ್ ಮುಡುಬಿದ್ರೆ ಅವರ ಸಹ ನಿರ್ದೇಶನವಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನವಿರುವ ಚಿತ್ರ ಸಿ ಟೌನ್ ನಲ್ಲಿ ತನ್ನದೇ ದಾಖಲೆ ಬರೆಯಲಿ ಎನ್ನೋದು ಸಿನಿಪ್ರೀಯರ ಆಶಯವಾಗಿದೆ.