ಮಂಗಳೂರು, ಮಾ,08 (MSP): ಇಟೆಲಿ ಮೂಲದ ಎಂಎಸ್’ಸಿ ಲಿರಿಕಾ ಪ್ರವಾಸಿ ಹಡಗು ಗುರುವಾರ ನವಮಂಗಳೂರು ಬಂದರಿಗೆ ಆಗಮಿಸಿದೆ. 1,831 ಪ್ರವಾಸಿಗರು ಹಾಗೂ 742 ಸಿಬಂದಿ ಈ ಐಷಾರಾಮಿ ಹಡಗಿನಲ್ಲಿದ್ದಾರೆ. ಈ ಐಷಾರಾಮಿ ಹಡಗಿ ಬಹು ಮಹಡಿಗಳನ್ನು ಹೊಂದಿದ್ದು ಲಾಂಜ್, ಈಜುಕೊಳ,ಜಿಮ್,ಕಾಫಿ ಸೆಂಟರ್ ಹೊಟೇಲ್,ಕ್ಯಾಸಿನೋ,ಅಮ್ಯೂಸ್ ಮೆಂಟ್ ಪಾರ್ಕ್ ಸಹಿತ ಎಲ್ಲಾ ಸೌಲಭ್ಯ ಹೊಂದಿದೆ.
ಮಸ್ಕತ್ ನಿಂದ ಪ್ರಯಾಣ ಬೆಳೆಸಿ ಈ ಹಡಗು ಮಂಗಳೂರಿಗೆ ಆಗಮಿಸಿದ್ದು ಲಿರಿಕಾ ಹಡಗಿನಲ್ಲಿದ್ದ ಪ್ರಯಾಣಿಕರು, ಮಂಗಳೂರು, ಕಾರ್ಕಳ ಮುಂತಾದ ಸುತ್ತಮುತ್ತಲಿನ ಪ್ರವಾಸಿ ಸ್ಥಳ, ದೇವಸ್ಥಾನ, ಶಾಪಿಂಗ್ ಮಾಲ್ ಗಳನ್ನು ಭೇಟಿಯಾದರು.ಈ ಹಡಗು ಮಂಗಳೂರಿನಿಂದ ಗೋವಾ ಬಳಿಕ ಮುಂಬಯಿ ಮಾರ್ಗವಾಗಿ ಮರಳಿ ಮಸ್ಕತ್ ಗೆ ಪ್ರಯಾಣ ಬೆಳಸಲಿದೆ.