ಉಡುಪಿ, ಡಿ 30 ( DaijiworldNews/MS): ಉಡುಪಿಯ ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದಿಂದ ನಡೆದಿದೆ ಎನ್ನಲಾದ ಬಹುಕೋಟಿ ಆರ್ಥಿಕ ವಂಚನೆಗೆ ಸಂಬಂಧಪಟ್ಟಂತೆ ಇದೀಗ ಉಡುಪಿ ಪೋಲಿಸರು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಕಮಲಾಕ್ಷಿ ವಿವಿಧೋದ್ದೇಶ ಸಂಘದ ಕಚೇರಿಯನ್ನು ಪೋಲಿಸರು ಸೀಲ್ ಮಾಡಿದ್ದು, ಕಮಲಾಕ್ಷಿ ವಿವಿಧೋದ್ದೇಶ ಸಹಕಾರಸಂಘ( ನಿ) ಕ್ಕೆ ಸಂಬಂಧಿಸಿದಂತೆ ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಆಸ್ತಿಗಳಿವೆ ಅವುಗಳನ್ನುಗುರುತಿಸಿ, ಈ ಆಸ್ತಿಗಳನ್ನು ಪರಾಬಾರೆ ಮಾಡಬಾರದು ಎಂದು ಪೌರಾಯುಕ್ತರು ನಗರಸಭೆ, ಜೆಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಉಪನೋಂದಣಾಧಿಕಾರಿಯವರಿಗೆ ಕೋರಿಕೆ ಪತ್ರಗಳನ್ನುಸಲ್ಲಿಸಲಾಗಿದೆ.
ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ(ನಿ) ಕ್ಕೆ ಸಂಬಂಧಿಸಿದಂತೆ ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿಇರುವ ಬ್ಯಾಂಕ್ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡುವಂತೆ ಎಲ್ಲಾ ಬ್ಯಾಂಕ್ ಹಾಗೂ ಸೊಸೈಟಿಗಳಿಗೆ ಕೋರಿಕೆ ಪತ್ರ ಸಲ್ಲಿಸಲಾಗಿದೆ.
ಸಹಕಾರ ಸಂಘಗಳ ಉಪ-ನಿಬಂಧಕರು, ಉಡುಪಿಜಿಲ್ಲೆ, ಉಡುಪಿ ರವರಿಗೆ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಡೆದ ವಂಚನೆ ಬಗ್ಗೆ ನಿಯಮಾನುಸಾರ ವಿಚಾರಣೆ ನಡೆಸಿ ವರದಿ ನೀಡಲು ಕೂಡಾ ಪೋಲಿಸ್ ಇಲಾಖೆ ಸೂಚನೆ ನೀಡಿದೆ.
ಈಗಾಗಲೇ ಪ್ರಕರನದ ಪ್ರಮುಖ ಆರೋಪಿ ಮತ್ತು ಸಂಘದ ಅಧ್ಯಕ್ಷ್ಯನಾದ ಬಿವಿ ಲಕ್ಷ್ಮೀನಾರಾಯಣನನ್ನು ಪೋಲಿಸರು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ತನಿಖೆಗಾಗಿ ಪೋಲಿಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಮುಂದಿನ ದಿನಗಳಲ್ಲಿ ಆರೋಪಿಗಳಿಗೆ ಮತ್ತು ಸಂಘಕ್ಕೆ ಸಂಭಂದಪಟ್ಟ ಆಸ್ತಿಯನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಅಟ್ಯಾಚ್ ಮಾಡಲಾಗುವುದು ಮತ್ತು ಸದ್ರಿ ಆಸ್ತಿಗಳನ್ನು ನಿಯಮಾನುಸಾರ ವಿಲೇ ಮಾಡಿ, ಹೂಡಿಕೆ ದಾರರಿಗೆ ಪರಿಹಾರವನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದ.
ಇನ್ನು ಈ ಪ್ರಕರಣದಲ್ಲಿ ಈಗಾಗಲೇ 100 ಜನ ಸಂತ್ರಸ್ತರು ತಮ್ಮ ದಾಖಲೆಗಳನ್ನು ಸೆನ್ ಪೋಲಿಸ್ ಠಾಣೆಗೆ ನೀಡಿದ್ದು, ಇನ್ನೂ 500 ರಿಂದ 600 ಮಂದಿ ಸಂತ್ರಸ್ತರು ದಾಖಲೆಗಳನ್ನು ನೀಡಲು ಬಾಕಿ ಇದ್ದು, ಇವರು ಕೂಡಾ ಶೀಘ್ರದಲ್ಲಿ ದಾಖಲಾತಿಗಳನ್ನು ಉಡುಪಿ ಸೆನ್ ಪೋಲಿಸ್ ಠಾಣೆಗೆ ನೀಡುವಂತೆ ಪೋಲಿಸರು ವಿನಂತಿಸಿಕೊಂಡಿದ್ದಾರೆ. ಈಗಾಗಲೇ ಈ ಕುರಿತು ಪ್ರಕರಣ ದಾಖಲಾಗಿದ್ದು, ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್ ಗಳಾದ ರವಿ ಉಪಾಧ್ಯ, ಬಿವಿ ಬಾಲಕೃಷ್ಣ, ಭಾಸ್ಕರ್ ಉಪಾಧ್ಯಾಯ ದಯ ಉಪಾಧ್ಯಾಯ, ರಾಧಿಕಾ, ಮತ್ತು ಸುಜಾತವರನ್ನು ಆರೋಪಿತರನ್ನಾಗಿ ಹೆಸರಿಸಲಾಗಿದೆ.