ಮಂಗಳೂರು,ಮಾ.07(AZM):ಮಂಗಳೂರು ಮೇಯರ್ ಆಗಿ ಭಾಸ್ಕರ್ ಮೋಯ್ಲಿಯವರು ಅಧಿಕಾರವಧಿಯ ಒಂದು ವರ್ಷ ಪೂರೈಕೆ ಮಾಡಿದ್ದು, ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ಮಾಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮೇಯರ್ ಭಾಸ್ಕರ್ ಮೋಯ್ಲಿಯವರು ತಮ್ಮ ಅಭಿವೃದ್ಧಿ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಮಳೆ ನೀರಿನ ಚರಂಡಿ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು ಎಂದರು. ಇನ್ನು ಅಮೃತ್ ಯೋಜನೆ, 2 ನೇ ಹಂತದ ಎಡಿಬಿ ಯೋಜನೆ ಜಾರಿ, ಮಂಗಳೂರಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ,ಬಡ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇನೆ ಎಂದು ಹೇಳಿದರು.
ಇನ್ನು ಮಂಗಳೂರು ಮಾರುಕಟ್ಟೆಗಳ ಅಭಿವೃದ್ಧಿಯಾಗಿದ್ದು, ಸ್ಮಾರ್ಟ್ ಸಿಟಿಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶುರು ಮಾಡಲಾಗಿದೆ. ಹಾಗೂ ನಗರದಲ್ಲಿ ಈಜು ಕೊಳವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದ ಅವರು, ನಿರ್ಮಾಣ ಹಂತದ ಕಟ್ಟಡಗಳಿಂದ 120 ಕೋಟಿ ಹಣ ಸಂಗ್ರಹ, ಮಳೆಗಾಲದ ನೆರೆ ಪ್ರವಾಹ ತಡೆಗಟ್ಟಲು ಅಗತ್ಯ ಕ್ರಮ ವನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.