ಕಾಸರಗೋಡು, ಡಿ 28 (DaijiworldNews/HR): ಹಾವೇರಿಯಲ್ಲಿ ನಡೆದ ಅಪಘಾತ ದಲ್ಲಿ ಗಂಭೀರ ಗಾಯಗೊಂಡಿದ್ದ ಮೂರು ವರ್ಷದ ಮಗು ಮೃತಪಟ್ಟಿದ್ದು, ಇದರಿಂದ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೇರಿದೆ.
ಗಾಯಗೊಂಡ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ತಳಂಗರೆ ನುಸ್ರತ್ ನಗರದ ಸಿಯಾದ್ - ಸಜ್ನ ದಂಪತಿ ಪುತ್ರ ಮುಹಮ್ಮದ್ (3) ಮೃತ ಪಟ್ಟವನು.
ಅಪಘಾತದಲ್ಲಿ ಸಿಯಾದ್ ನ ತಂದೆ ಮುಹಮ್ಮದ್ (65) ತಾಯಿ ಆಯಿಶಾ (62) ಮೃತ ಪಟ್ಟಿದ್ದರು. ಸಿಯಾದ್ ಮತ್ತು ಸಜ್ನ ಹಾವೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಹಮ್ಮದ್ ಮತ್ತು ಆಯಿಶಾರ ಮೃತ ದೇಹಗಳನ್ನು ಹಾನಗಲ್ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ವೇಳೆಗೆ ಊರಿಗೆ ತರಲಾಗುವುದು.
ಮೂರು ವರ್ಷದ ಮಗು ಮುಹಮ್ಮದ್ ನ ಮೃತದೇಹ ಖಾಸಗಿ ಆಸ್ಪತ್ರೆ ಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಊರಿಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಿಗ್ಗೆ ಕಾರು ಮತ್ತು ಕರ್ನಾಟಕ ಸಾರಿಗೆ ನಿಗಮದ ಬಸ್ಸಿನ ನಡುವೆ ಅಪಘಾತ ನಡೆದಿತ್ತು. ಕಾರಲ್ಲಿ ಆರು ಮಂದಿ ಇದ್ದರೆನ್ನಲಾಗಿದೆ. ಕಾಸರಗೋಡಿನಿಂದ ಹುಬ್ಬಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಅಪಘಾತ ನಡೆದಿತ್ತು.