ಮಂಗಳೂರು, ಡಿ 28 (DaijiworldNews/HR): ಬಜ್ಪೆ ಸಮೀಪದ ಕೊಳಂಬೆ ಗ್ರಾಮದ ತಲ್ಲದಬೈಲು ಎಂಬಲ್ಲಿ ಆವರಣ ಇಲ್ಲದ ಬಾವಿಗೆ ಆಯಾ ತಪ್ಪಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಡಿ. 27 ರಂದು ನಡೆದಿದೆ.
ಮೃತರನ್ನು ಪದ್ಮನಾಭ ಬೆಲ್ಚಡ (51) ಎಂದು ಗುರುತಿಸಲಾಗಿದ್ದು, ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಪದ್ಮನಾಭ ಬಜ್ಪೆಯಲ್ಲಿ ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಆ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಯಲ್ಲಿರುವ ಕಾರಣ ಮನೆಯಲ್ಲೇ ಇದ್ದರು. ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮನೆ ಸಮೀಪದ ಬಾವಿ ಬಳಿ ತೆರಳಿದಾಗ ಆಕಸ್ಮಿಕವಾಗಿ ಬಿದ್ದು ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.