ಮಂಗಳೂರು, ಡಿ 26 (DaijiwordNews/HR): ಉಳ್ಳಾಲ ಹಾಗೂ ಮಂಗಳೂರಿನಿಂದ ಶಬರಿಮಲೆಗೆ ಹೋಗುವಂಥಹ ಅಯ್ಯಪ್ಪ ಮಾಲಾಧಾರಿಗಳನ್ನು ಕೊಂಡೊಯ್ಯಲು ಬರುವ ಕೇರಳದ ವಾಹನಗಳಿಗೆ ಗಡಿಯಲ್ಲಿ ಅವಕಾಶ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಉಳ್ಳಾಲ ಹಾಗೂ ಮಂಗಳೂರಿನಿಂದ ಪವಿತ್ರ ಶಬರಿಮಲೆ ಯಾತ್ರೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ಕರ್ನಾಟಕ ಮತ್ತು ಕೇರಳದ ಎರಡೂ ರಾಜ್ಯಗಳ ತೆರಿಗೆ ಪಾವತಿಸಲು ಕಷ್ಟವಾದ ಕಾರಣ ಕೇರಳದಿಂದ ವಾಹನಗಳನ್ನು ವ್ಯವಸ್ಥೆಗೊಳಿಸಿ ತೆರಳುತ್ತಿದ್ದುಅಂಥಹ ವಾಹನಗಳಿಗೆ ತಲಪಾಡಿ ಗಡಿಯಲ್ಲಿ ಅಧಿಕಾರಿಗಳು ಮಂಗಳೂರು ತನಕ ಬಂದು ಹೋಗಲು ಅವಕಾಶ ನೀಡಬೇಕೆಂದು ಶಾಸಕ ಯು.ಟಿ.ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಅಯ್ಯಪ್ಪ ಮಾಲಾಧಾರಿಗಳಿಗೆ ಸಲಹೆ ಸಹಕಾರ ಬೇಕಿದ್ದಲ್ಲಿ 918050003277(ಭವಿತ್ ಬಂಗೇರ) ಯು.ಟಿ.ಖಾದರ್ ರವರ ಆಪ್ತ ಸಹಾಯಕರ ದೂರವಾಣಿ ಸಂಖ್ಯೆಯನ್ನು ಸಂರ್ಕಿಸಬಹುದು ಎಂದು ಶಾಸಕರ ಕಛೇರಿ ಪ್ರಕಟನೆಯಲ್ಲಿ ತಿಳಿಸಿದೆ.