ಉಡುಪಿ, ಡಿ 26 (DaijiwordNews/HR): ಮಲ್ಪೆ ಕಡಲ ತೀರದಲ್ಲಿ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಭಾನುವಾರ ಡಿ.25ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇರಳ ಬಿಟ್ಟರೆ ಇಡೀ ದೇಶದಲ್ಲಿ ಮಲ್ಪೆ ಬೀಚ್ನಲ್ಲಿ ಮಾತ್ರ ನಿರ್ಮಾಣಗೊಂಡಿರುವ ಸೇತುವೆ ಇದಾಗಿದ್ದು ಪ್ರವಾಸಿಗರು ಇನ್ನಷ್ಟು ಖುಷಿ ಪಡಬಹುದು ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಎಸ್ಪಿ ಅಕ್ಷಯ್ ಹಾಕೆ ಮುಖ್ಯ ಅತಿಥಿಗಳಾಗಿದ್ದು, ಕಳೆದ ಮೇ ತಿಂಗಳ ಮಧ್ಯೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರವಾಸಿಗರ ಆಕರ್ಷಣೆಗೆ ತೇಲು ಸೇತುವೆಯನ್ನು ಆರಂಭಿಸಲಾಗಿತ್ತು. ಕೆಲವೊಂದು ತಾಂತ್ರಿಕ ಕಾರಣದಿಂದ ಕೆಲವೇ ದಿನಗಳಲ್ಲಿ ಅದು ಸ್ಥಗಿತಗೊಂಡಿತ್ತು.
ಇನ್ನು ಕೇರಳ ಮತ್ತು ರಾಜ್ಯದ ತಜ್ಞರ ತಂಡ ಪರಿಶೀಲನೆಗೆ ಆಗಮಿಸಿದ್ದು, ತೇಲುವ ಸೇತುವೆಯ ಸಾಮರ್ಥ್ಯ ಕಾರ್ಯಕ್ಷಮತೆಯನ್ನು ಪರೀಕ್ಷೆಗೆ ಒಳಪಡಿಸಿ ದೃಢೀಕರಿಸಿದೆ. ವೈಜ್ಞಾನಿಕ ವಾಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ಸೇತುವೆಯ ಬ್ಲಾಕ್ಗಳು ಮಾಂಡೌಸ್ ಚಂಡಮಾರುತಕ್ಕೂ ಹಾನಿಯಾಗಿಲ್ಲ. ಹೆಚ್ಚು ದೃಢವಾದ ಜೋಡಣೆಯಿಂದ ಗಟ್ಟಿಯಾಗಿದೆ. ವರದಿ ಆಧಾರದಲ್ಲಿ ಜಿಲ್ಲಾಡಳಿತವು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ರವಿವಾರ ಆರಂಭಗೊಂಡಿದೆ.
ಸಂಸ್ಥೆಯ ಪಾಲುದಾರರಾದ ಶೇಖರ್ ಪುತ್ರನ್, ಧನಂಜಯ ಕಾಂಚನ್, ಸುದೇಶ್ ಶೆಟ್ಟಿ ಮೊದ ಲಾದವರು ಪಾಲ್ಗೊಂಡಿದ್ದರು.