ಬಂಟ್ವಾಳ, ಡಿ 24 (DaijiworldNews/HR): ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಕಡಬದ ಗೋಳಿತೊಟ್ಟು ನಿವಾಸಿ ಮೊಹಮ್ಮದ್ ಇರ್ಫಾನ್(24) ಎಂದು ಗುರುತಿಸಲಾಗಿದೆ.
ಆಗಸ್ಟ್ 07ರಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗಾಣದಪಡ್ಪು ಎಂಬಲ್ಲಿರುವ ಗುರುಕೃಪಾ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ರಾಜರಾಮ್ ಎಂಬವರಿಗೆ ಸೇರಿದ 'ವಾಹಿನಿ' ಹೆಸರಿನ ಹೋಲ್ ಸೇಲ್ ಅಂಗಡಿಯ ಶಟರಿನ ಬಾಗಿಲ ಬೀಗವನ್ನು ಮರಿದು ಒಳ ಪ್ರವೇಶಿಸಿ ಅಂಗಡಿಯೊಳಗಿದ್ದ 20,000/- ರೂಪಾಯಿ ಮೌಲ್ಯದ 2 ಮೊಬೈಲ್ ಪೋನ್ ಗಳನ್ನು ಹಾಗೂ ನಗದು 10,000/- ಹಣವನ್ನು ಕಳವು ಮಾಡಿದ್ದಾನೆ.
ಇನ್ನು ಆರೋಪಿಯು 2021ನೇ ನವೆಂಬರ್ ತಿಂಗಳಲ್ಲಿ ಬಿ ಮೂಡ ಗ್ರಾಮದ ಬಿ.ಸಿ.ರೋಡ್ ಶ್ರೀನಿವಾಸ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ವಕೀಲರಾದ ಸುದರ್ಶನ್ ರವರ ಕಛೇರಿಯಲ್ಲಿದ್ದ ರೂಪಾಯಿ 3,000/- ಕಳವು ಮಾಡಿದ್ದು, 2022 ನೇ ಡಿಸೆಂಬರ್ 6 ರಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿರುವ ಮನೆಯ ಬಾಗಿಲನ್ನು ಬೀಗವನ್ನು ಮುರಿದು ನಗದು ಕಳವು ಮಾಡಿದ್ದಾನೆ.
ಆರೋಪಿಯ ಪತ್ತೆ ಕಾರ್ಯಚರಣೆಯಲ್ಲಿ ಬಂಟ್ವಾಳ ನಗರ ಠಾಣಾ ಪಿಐ ವಿವೇಕಾನಂದರವರ ನೇತೃತ್ವದ ತಂಡದಲ್ಲಿ ಪಿಎಸ್ಐ ಅವಿನಾಶ್, ಕಲೈಮಾರ್ ಸಿಬ್ಬಂದಿಯವರಾದ ರಾಜೇಶ್, ಇರ್ಷಾದ್, ಗಣೇಶ್ ಹಾಗೂ ಪ್ರವೀಣ್ ರವರು ಭಾಗವಹಿಸಿದ್ದರು.