ಕಾಸರಗೋಡು, ಡಿ 24 (DaijiworldNews/HR): ನೀರು ತುಂಬಿದ್ದ ಬಕೆಟ್ ನೊಳಗೆ ಬಿದ್ದು 11 ತಿಂಗಳ ಮಗು ಮೃತಪಟ್ಟ ದಾರುಣ ಘಟನೆ ಅಂಬಲತ್ತರದ ಏಳನೇ ಮೈಲ್ ನಲ್ಲಿ ನಡೆದಿದೆ.
ಅಬ್ದುಲ್ ಜಬ್ಬಾರ್ ರವರ ಪುತ್ರ ಮುಹಮ್ಮದ್ ರಿಸಾಯ್ ಮೃತಪಟ್ಟ ಮಗು.
ಮನೆಯ ಜಗಲಿಯಲ್ಲಿ ನೀರು ತುಂಬಿಸಿಟ್ಟಿದ್ದ ಬಕೆಟ್ ನೊಳಗೆ ಬಿದ್ದು ಈ ದುರ್ಘಟನೆ ನಡೆದಿದೆ.
ಜಗಲಿಯಲ್ಲಿ ಆಟವಾಡುತ್ತಿದ್ದ ಮಗು ತಾಯಿ ಅಡುಗೆ ಕೋಣೆಗೆ ತೆರಳಿ ಮರಳಿದಾಗ ನಾಪತ್ತೆಯಾಗಿದ್ದು, ಹುಡುಕಾಡಿದಾಗ ಬಕೆಟ್ ನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಕೂಡಲೇ ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.