ಬೆಳ್ತಂಗಡಿ, ಡಿ 24 (DaijiworldNews/HR): ಕ್ರಿಸ್ಮಸ್ ಹಬ್ಬದಂದು ಕ್ರೈಸ್ತರ ಮನೆಯಲ್ಲಿ ಗೋದಲಿ ನಿರ್ಮಿಸಿರುವುದನ್ನು ನಾವು ನೋಡಿರುತ್ತೇವೆ. ಆದರೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನಲ್ಲಿ ವಿಶೇಷ ಎಂಬಂತೆ ಹಿಂದೂ ಯುವಕರಿಂದ ಸುಂದರವಾದ ಲೈವ್ ಗೋದಲಿ ನಿರ್ಮಾಣವಾಗಿದೆ.
ದನ, ಕರು, ಮೇಕೆಗಳು, ಮೊಲಗಳನ್ನು ಬಳಸಿಕೊಂಡು ಗೋದಲಿಯನ್ನು ನಿರ್ಮಾಣ ಮಾಡಿದ್ದು, ಸಂಪೂರ್ಣ ನ್ಯಾಚುರಲ್ ವಸ್ತುಗಳನ್ನು ಬಳಕೆ ಮಾಡಲಾಗಿದ್ದು ಇದು ನೋಡುಗರ ಗಮನ ಸೆಳೆಯುತ್ತಿದೆ.
ಇನ್ನು ಹನ್ನೆರಡು ಮಂದಿ ಹಿಂದೂ ಹಾಗೂ ಓರ್ವ ಮುಸ್ಲಿಂ ಯುವಕರ ತಂಡದಿಂದ ಗೋದಲಿ ನಿರ್ಮಾಣವಾಗಿದ್ದು, ಅನೇಕ ಮಂದಿ ಈ ಯುವಕ ತಂಡವನ್ನು ಪ್ರಶಂಸಿದ್ದಾರೆ.
ಸ್ಥಳೀಯ ಯುವಕರಾದ ಪ್ರವೀಣ್ ಪೂಜಾರಿ, ಸಂತೋಷ್ ಹೆಗ್ಡೆ, ಪ್ರವೀಣ್, ಸೋಮಯ್ಯ, ಸಾಗರ್, ಆಸಿಫ್, ಸುರೇಶ, ಶಿವರಾಜ ಆಚಾರ್ಯ, ಅರುಣ್, ಗುರು ಹಾಗೂ ಸುಜಿತ್ ಸೇರಿ ಸುಂದರವಾದ ಗೋದಲಿಯೊಂದನ್ನು ನಿರ್ಮಿಸಿದ್ದಾರೆ.