ಉಪ್ಪಿನಂಗಡಿ, ಡಿ 24 (DaijiworldNews/DB): ಇಲ್ಲಿನ ಡಾ. ಕೆ.ಜಿ. ಭಟ್ ಬಿಲ್ಡಿಂಗ್ನಲ್ಲಿ ಜೊಸ್ಸೀಸ್ ಆಯುರ್ವೇದ ಆಸ್ಪತ್ರೆ ಮತ್ತು ನೆಕ್ಕಿಲಾಡಿಯಲ್ಲಿ ಬಳ್ಳಿ ಆಯುರ್ಗ್ರಾಮ ಆಯುರ್ವೇದ ಆಸ್ಪತ್ರೆ ಹೊಂದಿರುವ ಡಾ. ಸುಪ್ರೀತ್ ಲೋಬೋ ಅವರು ಭುವನೇಶ್ವರದ ಉತ್ಕಲ ವಿಶ್ವವಿದ್ಯಾನಿಲಯದಿಂದ ಆಯುರ್ವೇದದಲ್ಲಿ ಪಿಎಚ್ಡಿ ಪದವಿ ಗಳಿಸಿದ್ದಾರೆ.
ಡಾ. ಚತುರ್ಭುಜ ಭುಯಾನ್ A COMPARATIVE CLINICAL STUDY OF AGNIKARMA WITH SUVARN SHALAKA AND PANCHADHATU SHALAKA IN JANUSANDHIGATA VATA W.S.R. TO OSTEOARTHRITIS OF KNEE JOINT ಎಂಬ ಮಹಾ ಪ್ರಬಂಧ ಮಂಡಿಸಿ ಅವರು ಆಯುರ್ವೇದದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಮೊಣಗಂಟು ನೋವಿನ ಮೇಲೆ ಸಂಶೋಧನೆ ನಡೆಸಿದ್ದರು.
ಸುಪ್ರೀತ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ನೆಲ್ಯಾಡಿಯ ಜ್ಞಾನೋದಯ ಬೆಥನಿಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಡೆದಿದ್ದರು. ಹಾಸನದ ಎಸ್ಡಿಎಂ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬಿಎಎಂಎಂಎಸ್ ಪದವಿ ಪಡೆದಿದ್ದರು. ಎನೆಸ್ಸೆಸ್ನಲ್ಲಿ ಸಕ್ರಿಯರಾಗಿದ್ದ ಅವರು 2008ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕೆಡೆಟ್ ಆಗಿ ಭಾಗವಹಿಸಿದ್ದರು.
ಎಂ.ಎಸ್. (ಆಯು) ಸ್ನಾತಕೋತ್ತರ ಪದವಿಯನ್ನು ವಿಶ್ವದಲ್ಲೇ ಆಯುರ್ವೇದದ ಅಗ್ರಗಣ್ಯ ಸಂಸ್ಥೆಯಾದ ಗುಜರಾತ್ನ ಜಾಮ್ ನಗರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ನ್ಯಾಶನಲ್ ಇಂಪಾರ್ಟೆನ್ಸ್ (ಐಟಿಆರ್ಎ) ಎಂಎಸ್ (ಆಯು) ಜನರಲ್ ಮೆರಿಟ್ನಲ್ಲಿ ಪಡೆದಿರುವ ಅವರು ಪಿಜಿಡಿವೈಎನ್., ಯೋಗ ಮತ್ತು ನ್ಯಾಚುರೋಪತಿಯಲ್ಲಿ ಎರಡು ವರ್ಷದ ಪಿಜಿ ಡಿಪ್ಲೊಮ ಪದವಿಯನ್ನು ಪಡೆದಿದ್ದಾರೆ.
ಡಾ. ಸುಪ್ರಿತ್ ಅವರು 34-ನೆಕ್ಕಿಲಾಡಿ ಗ್ರಾಮದ ಬಳ್ಳಿ ನಿವಾಸಿ ದಿವಂಗತ ಜೊಸ್ಸಿ ಲೋಬೊ ಮತ್ತು ಐರಿನ್ ಲೋಬೊ ದಂಪತಿಯ ಪುತ್ರ. ದಂತ ವೈದ್ಯೆ ಡಾ. ಶೈನಿ ಪಾಯ್ಸ್ ಅವರನ್ನು ವಿವಾಹವಾಗಿದ್ದು, ಪ್ರಸ್ತುತ ಉಪ್ಪಿನಂಗಡಿ ಡಾ. ಕೆ.ಜಿ. ಭಟ್ ಬಿಲ್ಡಿಂಗ್ನಲ್ಲಿ ಜೊಸ್ಸೀಸ್ ಆಯುರ್ವೇದ ಆಸ್ಪತ್ರೆ ಮತ್ತು ನೆಕ್ಕಿಲಾಡಿಯಲ್ಲಿ ಬಳ್ಳಿ ಆಯುರ್ಗ್ರಾಮ ಆಯುರ್ವೇದ ಆಸ್ಪತ್ರೆ ಹಾಗೂ ವೆಲ್ನೆಸ್ ಸೆಂಟರ್ ನಡೆಸುತ್ತಿದ್ದಾರೆ.