ಮಂಗಳೂರು, ಡಿ 23 (DaijiworldNews/HR): ಮಂಗಳೂರಿನಲ್ಲಿ ಸತತವಾಗಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯ ದೌರ್ಜನ್ಯ ನಿಲ್ಲಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಚುನಾವಣೆ ಹತ್ತಿರ ಬರುವ ಸಮಯದಲ್ಲಿ ಇಂತಹ ಘಟನೆಗಳನ್ನು ಹುಟ್ಟುಹಾಕಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ನಡೆಯುತ್ತದೆ. ಇದಕ್ಕೆ ಆಡಳಿತಾರೂಡ ಬಿಜೆಪಿ ಸರಕಾರ ನೇರ ಹೊಣೆಯಾಗಿದೆ. ಯಾವುದೇ ಸಂಘಟನೆಗಳಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಇಂತಹ ಕೆಲಸ ನಡೆಸುವ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕುವುದರೊಂದಿಗೆ ಇಂತಹ ಕೃತ್ಯದಲ್ಲಿ ತೊಡಗುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದರು.
ಈ ವೇಳೆ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ಹಾಗು ಜಿಲ್ಲಾ ಯುವ ಸಂಘಟನಾ ಉಸ್ತುವಾರಿಯಾದ ರತೀಶ್ ಕರ್ಕೆರ, ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸತ್ತಾರ್ ಬಂದರ್, ಮಂಗಳೂರು ಕ್ಷೇತ್ರಾಧ್ಯಕ್ಷರಾದ ಖಲೀಲ್, ಜಿಲ್ಲಾ ನಾಯಕರಾದ ಸುಶೀಲ್ ನೊರೊನ್ಹಾ, ದಿನಕರ್ ಉಲ್ಲಾಳ್, ರತ್ನಾಕರ್ ಸುವರ್ಣ, ಇಕ್ಬಾಲ್ ಮುಲ್ಕಿ, ನಾಸೀರ್ ಉಲ್ಲಾಳ್, ಮಹಿಳಾ ಘಟಕದ ಅಧ್ಯಕ್ಷರಾದ ರಮೀಝಾ ನಾಸೀರ್, ಎಮ್ ಎನ್ ಶಾೀಂ, ಪು, ನಾಸೀರ್ ಬಂದರ್, ಮಂಗಳೂರು ದಕ್ಷಿಣ ಕ್ಷೇತ್ರ ದ ಮಹಾಪ್ರದಾನ ಕಾರ್ಯದರ್ಶಿ ಸುಮಿತ್ ಸುವರ್ಣ, ಹಾಗು ಮಂಗಳೂರು ಉತ್ತರ ಕ್ಷೇತ್ರದ ಮಹಾಪ್ರದಾನ ಕಾರ್ಯದರ್ಶಿ ರಹೀಮ್ ಮಲ್ಲೂರು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಿವ ಸಾಲ್ಯಾನ್, ರಿನೀತ್ ಎನ್ ಪುಜಾರಿ, ನಿತೇಶ್ ಪೂಜಾರಿ, ಧನುಷ್, ವಿನೀತ್ ಪುಜಾರಿ, ಪ್ರದೀಪ್, ನಿಶಾಂತ್ ಪುಜಾರಿ, ಜಯದೀಪ್, ಕಾರ್ತಿಕ್ ಪುಜಾರಿ, ವಿನಯ್, ಜಿತೇಶ್ ರೈ, ಆಶಿಶ್ ಶೆಟ್ಟಿ, ನಿಜಾಳ್, ನಿಖಿಲ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.