ಕಾಸರಗೋಡು, ಡಿ 23 (DaijiworldNews/HR): ಮೂಢನಂಬಿಕೆಗಳ ಕಗ್ಗತ್ತಲೆಯಿಂದ ವೈಜ್ಞಾನಿಕ ಚಿಂತನೆಯ ಬೆಳಕಿನೆಡೆಗೆ ಎಂಬ ಘೋಷಣೆಯೊಂದಿಗೆ ಕೇರಳ ರಾಜ್ಯ ಗ್ರಂಥಾಲಯ ಸಮಿತಿ ನೇತೃತ್ವದಲ್ಲಿ ಉತ್ತರ ವಲಯ 'ಜನಚೇತನ ಯಾತ್ರೆ' ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕವಾದ ಗಿಳಿವಿಂಡುವಿನಿಂದ ಪ್ರಯಾಣ ಬೆಳೆಸಿತು.
ಜಾಥಾಕ್ಕೆ ಹಿರಿಯ ಚಲನಚಿತ್ರ ನಿರ್ದೇಶಕ ಶಾಜಿ ಎನ್ . ಕರುಣ್ ಚಾಲನೆ ನೀಡಿದರು ಜಿಲ್ಲಾ ಗ್ರಂಥಾಲಯ ಸಮಿತಿ ಅಧ್ಯಕ್ಷ ಕೆ.ವಿ. ಕುಂಞರಾಮನ್ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಕುಂಞಕೃಷ್ಣನ್ ಆಮುಖ ಭಾಷಣವನ್ನುಕೇರಳ ರಾಜ್ಯ ಗ್ರಂಥಾಲಯ ಸಮಿತಿ ಅಧ್ಯಕ್ಷ ಹಾಗೂ ಜಾಥಾ ನಾಯಕ ಡಾ.ಕೆ.ವಿ ಕುಂಞಕೃಷ್ಣನ್ ಪ್ರಧಾನ ಭಾಷಣ ಮಾಡಿದರು.
ಡಾ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಮುಖ್ಯ ಅತಿಥಿ ಯಾಗಿ ಉಪಸ್ಥಿತರಿದ್ದರು. ಪ್ರೊ.ಎಂ.ಎಂ.ನಾರಾಯಣನ್, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದರವರು ರಾಷ್ಟ್ರ ಕವಿ ಗೋವಿಂದ ಪೈರವರ ಸಂಸ್ಮರಣೆ ನಡೆಸಿದರು.
ರಾಜ್ಯ ಗ್ರಂಥಾಲಯ ಸಮಿತಿ ಮಾಜಿ ಕಾರ್ಯದರ್ಶಿ ನ್ಯಾಯವಾದಿ ಅಪ್ಪುಕುಟ್ಟನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಜಮೀಲಾ ಸಿದ್ದೀಖ್, ನಾರಾಯಣ ನಾಯಕ್, ಗೋಲ್ಡನ್ ಅಬ್ದುಲ್ ರಹಮಾನ್, ಕೆ.ಕಮಲಾಕ್ಷಿ, ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ಮಂಚೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ರಾಷ್ಟ್ರ ಕವಿ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ. ಸಾಲಿಯಾನ್ ಮೊದಲಾದವರು ಮಾತನಾಡಿದರು.
ಜಿಲ್ಲಾ ಗ್ರಂಥಾಲಯದ ಸಮಿತಿ ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್ ಸ್ವಾಗತಿಸಿ, ಪಿ.ವಿ.ಕೆ.ಪನಯಾಲ್ ವಂದಿಸಿದರು. ಉತ್ತರ ವಲಯ ಜಾಥಾ ಡಿಸೆಂಬರ್ 30 ರಂದು ತೃಶೂರಿಗೆ ತಲಪಲಿದೆ.