ಉಡುಪಿ, ಡಿ. 22 (DaijiworldNews/SM): ಭಾರತೀಯ ಜನತಾ ಪಕ್ಷಕ್ಕೆ ಅಟಲ್ ಬಿಹಾರಿ ವಾಜಿಪೇಯಿರವರ ಕೊಡುಗೆ ಅಪಾರವಾಗಿದ್ದು ಅವರ ಜನ್ಮ ದಿನದಂದು ಅಟಲ್ ಉತ್ಸವವನ್ನು ಗ್ರಾಮ ದೇವರ ಉತ್ಸವದಂತೆ ವಿಜೃಂಭಣೆಯಿAದ ನಡೆಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಅವರು ಇಂದು, ಜಿಲ್ಲೆಯ ಎಮ್.ಜಿ.ಎಮ್ ಮೈದಾನದಲ್ಲಿ ನಡೆದ ಅಟಲ್ ಉತ್ಸವದ ಪೂರ್ವಭಾವಿ ಸಭೆ ಹಾಗೂ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. 1999 ರಿಂದ ಜಿಲ್ಲಾ ಯುವ ಮೋರ್ಚಾದ ವತಿಯಿಂದ ವಾಲಿಬಾಲ್ ಪಂದ್ಯಾಟದ ಮುಖಾಂತರ ಅಟಲ್ ಟ್ರೋಫಿ ಪ್ರಾರಂಭಿಸಿದ್ದು ಈ ಬಾರಿ ಕಬ್ಬಡಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಅಟಲ್ ಬಿಜಾರಿ ವಾಜಿಪೇಯಿ ಜನ್ಮ ದಿನಾಚರಣೆಯ ಪ್ರಯುಕ್ತ ಡಿಸೆಂಬರ್ 24 ರಂದು ಅಟಲ್ ಟ್ರೋಫಿ ಹೊನಲು ಬೆಳಕಿನ ರಾಷ್ಟç ಮಟ್ಟದ ಮುಕ್ತ ಪ್ರೊ ಕಬ್ಬಡಿ ಪಂದ್ಯಾಟ ಹಾಗೂ 25 ರಂದು ಅಟಲ್ ಉತ್ಸವ ಹಾಗೂ ಬೂತ್ ಸಂಗಮ ಉದ್ಘಾಟನೆ ಎಮ್.ಜಿ.ಎಮ್ ಮೈದಾನದಲ್ಲಿ ನಡೆಯಲಿದೆ ಎಂದರು.
ರಾಷ್ಟಿçÃಯ ಮಟ್ಟದಲ್ಲಿ ಅಟಲ್ ಟ್ರೋಫಿ ನಡೆಯಲಿದ್ದು, ವಿವಿಧ ರಾಜ್ಯಗಳ 12 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದು, ಪ್ರಥಮ ಬಹುಮಾನ 1 ಲಕ್ಷ ನಗದು, ದ್ವಿತೀಯ ಬಹುಮಾನ 75 ಸಾವಿರ ನಗದು, ತೃತೀಯ ಬಹುಮಾನ 50 ಸಾವಿರ ಹಾಗೂ ಚತುರ್ಥ ಬಹುಮಾನ ಗಳಿಸಿದವರಿಗೆ 25 ಸಾವಿರ ನಗದು ಬಹುಮಾನ ಹಾಗೂ ವಿಜೇತ ತಂಡಗಳಿಗೆ ಅಟಲ್ ಟ್ರೋಫಿ ನೀಡಲಾಗುವುದು ಎಂದರು. ಸಂಜೆ 5ರಿಂದ ಪಂದ್ಯಕೂಟ ಆರಂಭವಾಗಲಿದ್ದು, ಪಂದ್ಯಕೂಟದಲ್ಲಿ ಸುಮಾರು 6 ಸಾವಿರ ಜನರು ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಹಾಗೂ ಸುಮಾರು 5 ಸಾವಿರ ಜನ ಕುಳಿತುಕೊಂಡು ವೀಕ್ಷಿಸಲು ಸ್ಟೇಡಿಯಂ ವ್ಯವಸ್ಥೆ ಮಾಡಲಾಗಿದ್ದು, ಒಟ್ಟಾರೆಯಾಗಿ ಸರಿ ಸುಮಾರು 25 ಸಾವಿರ ಜನ ಪಂದ್ಯಕೂಟ ವೀಕ್ಷಿಸುವ ನಿರೀಕ್ಷೆ ಇದೆ ಎಂದರು. ಪಂದ್ಯಕೂಟದ ಉದ್ಘಾಟನೆಯನ್ನು ಕೇಂದ್ರ ಯುವ ಜನ, ಕ್ರೀಡೆ ಹಾಗೂ ಮಾಹಿತಿ ಮತ್ತು ಪ್ರಸರಣ ಇಲಾಖೆಯ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ನೆರವೇರಿಸಲಿದ್ದು, ರಾಜ್ಯ ಸರ್ಕಾರದ ಕ್ರೀಡೆ ಮತ್ತು ಯುವ ಜನ ಸಬಲೀಕರಣದ ಸಚಿವ ಡಾ. ಕೆ.ಸಿ ನಾರಾಯಣ ಗೌಡ ಪಂದ್ಯಗಳಿಗೆ ಚಾಲನೆ ನಿಡಲಿದ್ದಾರೆ ಎಂದು ಅವರು ತಿಳಿಸಿದರು.
ಡಿಸೆಂಬರ್ 25 ರಂದು ಸಂಜೆ 4 ಗಂಟೆಗೆ ಅಟಲ್ ಉತ್ಸವ ಹಾಗೂ ಬೂತ್ ಸಂಗಮ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಾರ್ಟಿಯ ವರಿಷ್ಠ ನಾಯಕರಾದ ಬಿ.ಎಸ್. ಯಡಿಯೂರಪ್ಪ ಉಡುಪಿ ವಿಧಾನ ಸಭಾ ಕ್ಷೇತ್ರದ 226 ಮತಗಟ್ಟೆಗಳ ಆಯ್ದ 5 ಮತಗಟ್ಟೆಗಳ ಅಧ್ಯಕ್ಷರೊಂದಿಗೆ ನಡೆಸಲಿದ್ದಾರೆ ಹಾಗೂ ಬೂತ್ ಸಮಾವೇಶದ ನಂತರ ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಹಾಗೂ ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಹಾಗೂ 226 ಮತಗಟ್ಟೆಯ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದು, ಭಾರತೀಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ ಇವರಿಂದ ಸಂಘಟನಾತ್ಮಕ ಮಾತುಗಳು ನಡೆಯಲಿವೆ ಎಂದರು.
ಭಾರತೀಯ ಜನತಾ ಪಾರ್ಟಿಯ ಉಡುಪಿ ನಗರ ಭಾಜಪದ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ, ಬೂತ್ ಸಂಚಾಲಕ ರಾಘವೇಂದ್ರ ಕಿಣಿ ನಿರೂಪಿಸಿ ವಂದಿಸಿದರು.
ಸಭೆಯಲ್ಲಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಅಟಲ್ ಟ್ರೋಫಿ ಸಂಚಾಲಕ ಹಾಗೂ ನಗರ ಸಭೆ ಸದಸ್ಯ ಗಿರೀಶ್ ಎಮ್. ಅಂಚನ್, ಯುವ ಸಂಗಮದ ಉಸ್ತುವಾರಿ ಉಮೇಶ್ ನಾಯಕ್, ಉಡುಪಿ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಗರ ಸಭೆ ಉಪಾಧ್ಯಕ್ಷೆ ಲಕ್ಷಿö್ಮÃ ಮಂಜುನಾಥ್ ಕೊಳ, ಕಲ್ಯಾಣಪುರ ಪಂಚಾಯತ್ ಅಧ್ಯಕ್ಷ ಕೃಷ್ಣ ದೇವಾಡಿಗ, ಬಡಾನಿಡಿಯೂರು ಪಂಚಾಯತ್ ಅಧ್ಯಕ್ಷ ಪ್ರಭಾಕರ ತಿಂಗಳಾಯ, ತೆಂಕನಿಡಿಯೂರು ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಹಾಗೂ ಅಂಬಲಪಾಡಿ ಪಂಚಾಯತ್ ಅಧ್ಯಕ್ಷೆ ರೋಹಿಣಿ ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.