ಕಾರ್ಕಳ, ಡಿ 22 (DaijiworldNews/DB): ಇಲ್ಲಿನ ಮುಡಾರು ಗ್ರಾಮದ ನೆಲ್ಲಿಗುಡ್ಡೆ ಶ್ರೀನಿವಾಸ ಆಚಾರ್ಯ ಅವರ ಮನೆಯ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಮೇಲಕ್ಕೆತ್ತಿದರು.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಕಾರ್ಕಳ ಗ್ರಾಮಾಂತರ ಎಸ್ಐ ತೇಜಸ್ವಿ ಅವರ ಮಾರ್ಗದರ್ಶನದೊಂದಿಗೆ ಚಿರತೆಯನ್ನು ಬಾವಿಯಿಂದ ಮೇಲಕ್ಕೆತ್ತಲಾಯಿತು.
ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ರಾಘವೇಂದ್ರ ಶೆಟ್ಟಿ, ಹುಕ್ರಪ್ಪ ಗೌಡ, ಚಂದ್ರಕಾಂತ ಪೋಳ್, ಅರಣ್ಯ ರಕ್ಷಕರಾದ ಮಹಾಂತೇಶ ಗೋಡಿ, ಸುನಿಲ್ ಪಿ., ಅರಣ್ಯ ವೀಕ್ಷಕರಾದ ಬಾಬು ಪೂಜಾರಿ, ಜಗದೀಶ ಸೇರಿಗಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸೆರೆ ಹಿಡಿಯಲಾದ ಚಿರತೆಯ ಆರೋಗ್ಯ ತಪಾಸಣೆ ನಡೆಸಿ ನಂತರ ಪಿಲಿಕುಳ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಬಿಡಲಾಗುವುದೆಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.