ಮಂಗಳೂರು,ಮಾ.06(AZM):70 ವರ್ಷದ ಇತಿಹಾಸದಲ್ಲಿ ಮೋದಿಯವರಂತಹ ದುರ್ದೈವ ಪ್ರಧಾನಿಯನ್ನು ದೇಶ ಕಂಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅವರು ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪರಿವರ್ತನಾ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಜೊತೆ ಕೈಜೋಡಿಸಿದರೆ ಕೈ ಕಡಿಯುತ್ತೇವೆ ಎಂದು ಹೇಳಿದ ಆರ್ ಎಸ್ ಎಸ್, ಮೋದಿಯವರು ಪಾಕಿಸ್ತಾನಕ್ಕೆ ಹೋಗಿ ಆಲಂಗನ ಮಾಡಿದ್ದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಟೀ ಮಾಡುವವರು ಪ್ರಧಾನಿಯಾಗಿ 400 ಕೋಟಿ ರೂ. ಖರ್ಚು ಮಾಡಿ ದೇಶಗಳನ್ನೆಲ್ಲಾ ಸುತ್ತಿ ಬಿಟ್ಟರು ಎಂದು ಹೇಳಿದ ಇಬ್ರಾಹಿಂ ಅವರು, ಇಂಧಿರಾ ಗಾಂಧಿ ಆಡಳಿತ ಸಮಯದಲ್ಲಿ 1 ಲಕ್ಷ ಪಾಕಿಸ್ತಾನದ ಸೈನಿಕರನ್ನು ವಶಕ್ಕೆ ಪಡೆದಿದ್ದರು. ಇದೀಗ ರಾಹುಲ್ ಗಾಂಧಿ ಬರುತ್ತಿದ್ದಾರೆ ಎಂದು ಹೇಳಿದರು.
ಉಮೇಶ್ ಜಾಧವ್ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ಗುಲ್ಬರ್ಗದಲ್ಲಿ ನಿಲ್ಲಲು ಅಭ್ಯರ್ಥಿಯೇ ಇಲ್ಲವಾಗಿದ್ದು, ನಾವು ಹುಟ್ಟಿಸಿದ ಮಗನನ್ನು ಮೋದಿಯವರು ಅಲ್ಲಿ ಹೋಗಿ ನಿಲ್ಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿಗೆ ಅಂತಹ ನೂರಾರು ಮಕ್ಕಳನ್ನು ಹುಟ್ಟಿಸುವ ತಾಕ್ಕತ್ತು ಇದೆ ಎಂದು ಹೇಳಿದರು.
ಯಡಿಯೂರಪ್ಪನವರಿಗೆ ಲೇವಡಿ ಮಾಡಿದ ಇಬ್ರಾಹಿಂ ಅವರು, ಯಡಿಯೂರಪ್ಪನವರಿಗೆ ಆಪರೇಷನ್ ಮಾಡಿ ಮಾಡಿ ಸಾಮಾನ್ಯ ಡೆಲವರಿ ಕೂಡಾ ಆಗದಂತಹ ಸ್ಥಿತಿ ಬಂದೊದಗಿದೆ. ಯಡಿಯೂರಪ್ಪ ಹಾಗೂ ಶೋಭಕ್ಕಾ ರಾಜ್ಯದ ಸೂಪರ್ ಜೋಡಿಗಳು ಎಂದು ಹೇಳಿದರು.
ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಯ ವಿಜಯ ಬ್ಯಾಂಕ್ ನ ಮಾನವನ್ನು ಬರೋಡ ಬ್ಯಾಂಕ್ ಮುಂದೆ ಹರಾಜು ಮಾಡಿದ್ದು, ಕರ್ನಾಟಕ ಬ್ಯಾಂಕ್ ಅನ್ನು ಕೂಡಾ ಮೋದಿಯವರು ತಿನ್ನುವುದಕ್ಕೆ ಹೋಗುತ್ತಿದ್ದಾರೆ ಎಂದರು.
ಇನ್ನು ಈಜಿಪ್ಟ್ನ ನಮ್ರೂದ್ ಗೆ ಹೆದರದ ಮುಸ್ಲಿಂ ಸಮುದಾಯ ಮೋದಿಯವರಿಗೆ ಹೆದರುತ್ತಾ? ಎಂದು ಪ್ರಶ್ನಿಸಿದ ಇಬ್ರಾಹಿಂ, "ಮೋದಿಯವರೇ ಹಿಂದೂ ಹಾಗೂ ಮುಸ್ಲಿಂ ಸಮುದಾಯ ಜೊತೆಯಾಗಿರಲು ಯಾರಿಗೂ ಹೆದರಬೇಕಾಗುವ ಅಗತ್ಯವಿಲ್ಲ. ಇನ್ನು ಕಲ್ಲಡ್ಕ ಭಟ್ ಬಂದರೂ ನಾವು ಹೆದರುವವರಲ್ಲ ಎಂದು ಹೇಳಿದರು.