ವಿಟ್ಲ,ಡಿ 21 ( DaijiworldNews/MS): ಪುಣಚ ಗ್ರಾಮದ ಆಜೇರು ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ಗುಂಡಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪುರುಷ ಮೃತದೇಹ ಪತ್ತೆಯಾಗಿದೆ.
ಸೊಪ್ಪು ಸೌದೆ ತರಲು ಗುಡ್ಡಕ್ಕೆ ಹೋದ ಸ್ಥಳೀಯ ನಿವಾಸಿಗಳಿಗೆ ಮೊಬೈಲ್ ಪತ್ತೆಯಾಗಿದೆ. ಇದನ್ನು ಗಮನಿಸೀ ಅಕ್ಕಪಕ್ಕದ ನೋಡಿ ಸಂದರ್ಭ ಮೃತದೇಹ ಪತ್ತೆಯಾಗಿದ್ದು, ಭಯಗೊಂಡು ಓಡಿಹೋಗಿದ್ದಾರೆನ್ನಲಾಗಿದೆ. ಪಕ್ಕದಲ್ಲಿರುವ ಮರದಲ್ಲಿ ಹಗ್ಗವೊಂದು ನೇತಾಡುತ್ತಿದ್ದು, ಮೃತದೇಹ ನೆಲದಲ್ಲಿ ಬಿದ್ದುಕೊಂಡಿದ್ದು, ಕೊಳೆತು ಅಸ್ಥಿಪಂಜರ ಮಾತ್ರ ಕಾಣುತ್ತಿದ್ದು ಸತ್ತು ಹಲವು ಸಮಯ ಕಳೆದಿದೆ ಎನ್ನಲಾಗಿದೆ