ಮಂಗಳೂರು, ಮಾ 06(SM): ಪುಲ್ವಾಮ ದಾಳಿಯ ವೇಳೆ ಎರಡು ಸಾವಿರ ಯೋದರ ಪ್ರಯಾಣ ಮಾಡುತ್ತಿದ್ದರು. ಈ ಸಂದರ್ಭ ಭದ್ರತೆ ಕೊರತೆಯಾಗಿದೆ. ಕೇಂದ್ರದ ವೈಫಲ್ಯವೇ ಇದಕ್ಕೆ ಮುಖ್ಯ ಕಾರಣವಾಗಿದೆ.ದೇಶದ ಇಂಟಲಿ ಜೆನ್ಸ್ ಎಲ್ಲಿ ಹೋಗಿದ್ದರು.ದೇಶದ ಇಷ್ಟು ಯೋದರ ಪ್ರಾಣ ಕಳೆದುಕೊಂಡಿರುವುದು ಕೇಂದ್ರ ಸರ್ಕಾರದ ವೈಫಲ್ಯ ಎಂಬುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಖಾರಿದ್ದಾರೆ.
ಅಡ್ಯಾರ್ ನಲ್ಲಿ ನಡೆದ ಕಾಂಗ್ರೆಸ್ ಪರಿವರ್ತನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಧರ ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದೀರಿ. ಅದರ ಮೇಲೆ ಹುತಾತ್ಮ ಯೋಧರ ಮೇಲೆ ರಾಜಕೀಯ ಮಾಡುತ್ತಿದ್ದೀರಿ. ಕೀಳು ಮಟ್ಟದ ರಾಕೀಯ ದೇಶದಲ್ಲಿ ಮೋದಿ ಸರಕಾರ ಮಾಡುತ್ತಿದೆ. ದೇಶದಲ್ಲೇ ಮೊದಿಯಷ್ಟು ಸುಳ್ಳು ಹೇಳೊ ಪ್ರಧಾನಿ ಇದುವರೆಗೂ ಯಾರೂ ಬಂದಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಸುಳ್ಳು ಹೇಳೋ ಪ್ರಧಾನಿಯಾಗಿದ್ದಾರೆ ಎಂಬುವುದಾಗಿ ಪ್ರಧಾಣಿ ಮೋದಿ ವಿರುದ್ಧ ವಾಕ್ಸಮರ ನಡೆಸಿದರು.
ಇನ್ನು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಮೀನುಗಾರರು ನಾಪತ್ತೆಯಾಗಿ ಎಂಬತ್ತು ದಿನಗಳು ಕಳೆದರೂ ಮೀನುಗಾರರ ಸುಳಿವು ಲಭ್ಯವಾಗಿಲ್ಲ. ಇದರ ಬಗ್ಗೆ ಕೇಂದ್ರ ಸರಕಾರ ಏನಾದರೂ ಕ್ರಮಕೈಗೊಂಡಿದೆಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ಯೆ ರಾಜಕೀಯ ನಡೆಸಲು ಮೀನುಗಾರರು ನಿಮಗೆ ಓಟ್ ಹಾಕಬೇಕಾ ಎಂಬುವುದಾಗಿ ಅವರು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ. ಎಲ್ಲಿದ್ದಾರೆ ಜಿಲ್ಲೆಯ ಸಂಸದರು? ಈ ವಿಚಾರದಲ್ಲಿ ಸಂಸದರು ಯಾಕೆ ಮೌನವಾಗಿದ್ದಾರೆ. ಇದಕ್ಕಾಗಿಯೇ ಮೀನುಗಾರರು ನಿಮಗೆ ಓಟ್ ನೀಡಬೇಕಾ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.