ಬಂಟ್ವಾಳ, ಡಿ. 19 (DaijiworldNews/SM):ರಾಜಕಾಲುವೆಯಲ್ಲಿಅಕ್ರಮಕಟ್ಟಡ; ಪುರಸಭಾ ವ್ಯಾಪ್ತಿಯಲ್ಲಿ ರಸ್ತೆಗಳ ಇಕ್ಕೆಲ ಪಾದಚಾರಿಗಳಿಗೆ ತೊಂದರೆಯಾಗುವಂತೆ ಅತಿಕ್ರಮಣ ಮಾಡಿರುವುದು,ಬಿ.ಸಿ.ರೋಡಿನ ಮೇಲ್ಸೇತುವೆಯಡಿಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ತರಕಾರಿ,ಇತರ ವಸ್ತುಗಳ ಮಾರಾಟವನ್ನು ತೆರವುಗೊಳಿಸುವಂತೆ ಅಧ್ಯಕ್ಷ ಶರೀಫ್ ಸೂಚಿಸಿದರು.
ಈ ಸಂದರ್ಭ ಸದಸ್ಯರಾದ ವಾಸುಪೂಜಾರಿ,ಮಹಮ್ಮದ್ ನಂದರಬೆಟ್ಟು ಅವರು ವಾರದ ಸಂತೆ ಮಾಡುವವರು ತಾವು ಪುರಸಭೆಗೆ ಹಣ ಸಂದಾಯ ಮಾಡುತ್ತೆವೆ ಎನ್ನುತ್ತಾರೆ ಎಂದರು. ಗುರುತು ಚೀಟಿ ಇರುವ ಬೀದಿಬದಿ ವ್ಯಾಪಾರಸ್ಥರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯರು ಒತ್ತಾಯಿಸಿದರು
ಬಿ.ಸಿ.ರೋಡಿನಲ್ಲಿ ಸುಂದರೀಕರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಲಾಗಿದೆ.
ಪುರಸಭೆಗೆ ಆದಾಯಬರುವ ನಿಟ್ಟಿನಲ್ಲಿ ಪ್ಳೈಒವರ್ ಅಡಿಯಲ್ಲಿ ಕ್ರಮಬದ್ದವಾಗಿ ಪೇಯ್ಡ್ ಪಾರ್ಕಿಂಗ್ ಮಾಡುವಂತೆ ಸದಸ್ಯ ಸಲಹೆ ನೀಡಿದರು.ಈ ಹಂತದಲ್ಲಿ ಸದಸ್ಯ ಜನಾರ್ದ ನ ಚಂಡ್ತಿಮಾರ್ ಅವರು ಪ್ರತಿಕ್ರಿಯಿಸಿ ಬೀದಿಬದಿ ವ್ಯಾಪಾರಿಗಳ ಬಗ್ಗೆ ಮಾತನಾಡುವ ನಾವು
ರಾಜಾಕಾಲುವೆಯನ್ನು ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸುವವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ದೊಡ್ಡಕುಳಗಳು ತಾಲೂಕು ಕಚೇರಿಯಿಂದ ಕೈಕುಂಜ ರಸ್ತೆಯನ್ನು ಅತಿಕ್ರಮಿಸಿದ್ದಾರೆ ಅವರನ್ನು ತೆರವುಗೊಳಿಸುವ ಧಮ್ ಇದೆಯೆ ಎಂದರು. ಅಶ್ರಯ ಯೋಜನೆಯಲ್ಲಿಬಾರೆಕಾಡು ಪ್ರದೇಶದಲ್ಲಿ ವಾಸ್ತವ್ಯವಿರುವವರಿಗೆ ಹಕ್ಕುಪತ್ರ ಯಾವಾಗ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದುಸದಸ್ಯ ವಾಸುಪೂಜಾರಿ ಪ್ರಶ್ನಿಸಿದರಲ್ಲದೆ 67 ಮಂದಿ ಫಲಾನುಭವಿಗಳಿಗೆ ಮಂಜೂರಾತಿಪತ್ರವನ್ನು ಪುರಸಭೆಯಲ್ಲೇ ಶಾಸಕರಿಂದ ವಿತರಿಸಬಹುದಿತ್ತು.ಶಾಸಕರಲ್ಲಿನಮ್ಮ ಸಮಸ್ಯೆ ಹೇಳಿಕೊಳ್ಳಲುಅವಕಾಶವಿತ್ತುಎಂದು ವಾಸುಪೂಜಾರಿ ಹೇಳಿದರು.
ಶಾಸಕರು ಎಲ್ಲರಿಗೂ ಶಾಸಕರೇ ಅವರ ಕಚೇರಿ ಸರಕಾರಿ ಕಚೇರಿ ಹೊರತು ಪಕ್ಷದ ಕಚೇರಿ ಅಲ್ಲ, ಅವರ ಕಚೇರಿಗೆ ಎಲ್ಲರಿಗೂ ಹೋಗಲು ಅವಕಾಶ ಇದೆ. ನೀವು ಅಲ್ಲಿ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಯಾರು ಪ್ರಶ್ನಿಸಲಾರರು ಎಂದು ಸದಸ್ಯ ಗೋವಿಂದ ಪ್ರಭು ನಗುತ್ತಲೇ ತಿರುಗೇಟು ನೀಡಿದರು