ಮಂಗಳೂರು,ಮಾ.06(AZM):ಕಳೆದ ಐದು ವರ್ಷದ ಹಿಂದೆ ಮೋದಿಯವರು ದೇಶದ ಜನತೆಗೆ ಅನೇಕ ಭರವಸೆ ನೀಡುತ್ತಿದ್ದಾರೆ ಬಿಟ್ಟರೆ ಯಾವುದೇ ಭರವಸೆಯನ್ನುಈಡೇರಿಸಿಲ್ಲ. ಇಂದು ಕಲಬುರಗಿಯಲ್ಲೂ ತಾವು ಬಂದಿದ್ದು, ತಮ್ಮ ಭಾಷಣದಲ್ಲಿ ಕೇವಲ ದೇವಸ್ಥಾನಗಳ ಕುರಿತು ಮಾತನಾಡುತ್ತಿದ್ದೀರಿ ಬಿಟ್ಟರೆ,ದೇಶದ ಜನರ ಜೀವನದ ಕುರಿತು ಮಾತನಾಡುತ್ತಿಲ್ಲ. ನೀವು ಕಳಪೆ ಮಟ್ಟದ ಆಡಳಿತ ಮಾಡುತ್ತಿದ್ದೀರ.ಈ ಲೋಕಸಭೆ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಎಂದು ಮಂಗಳೂರಿನಲ್ಲಿ ನಡೆದ ಪರಿವರ್ತನಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕುಮಾರ ಸ್ವಾಮಿ ಅವರು ರಿಮೋಟ್ ಕಂಟ್ರೋಲ್ ಸಿಎಂ ಹೇಳಿಕೆ ವಿಚಾರದಲ್ಲಿ ತಿರುಗೇಟು ನೀಡಿದ ಗುಂಡೂರಾವ್ ಅವರು,ನಮ್ಮದು ಮೈತ್ರಿ ಸರ್ಕಾರ ರಿಮೋಟ್ ಕಂಟ್ರೋಲ್ ಸಿಎಂ ಅಲ್ಲ.ರಿಮೋಟ್ ಕಂಟ್ರೋಲ್ ಯಾರು ಎಂಬುದು ಜನತೆಗೆ ತಿಳಿದಿದೆ.ಮೋದಿ ಅವರು ಅಂಬಾನಿಯ ಅವರ ರಿಮೋಟ್ ಕಂಟ್ರೋಲ್ ಆಗಿದ್ದಾರೆ.ನಮ್ಮ ಸಿಎಂ ಯಾರ ಕಂಟ್ರೋಲ್ ನಲ್ಲೂ ಇಲ್ಲ ನಾವು ಮೈತ್ರಿಯಲ್ಲಿದ್ದೇವೆ ಎಂದು ಹೇಳಿದರು.
ಪುಲ್ವಾಮಾ ಯೋದರ ಹತ್ಯೆ ವಿಚಾರದ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್ ಅವರು,ಕೇಂದ್ರದ ಭದ್ರತಾ ಕೊರತೆ ಇದು ನಿಮ್ಮ ವೈಫಲ್ಯ.ಇದರ ಬಗ್ಗೆ ನಾವು ಪ್ರಶ್ನೆ ಮಾಡಬಾರದೇ?ಯೋದರಿಗೆ ಭದ್ರತೆ ನೀಡಲಾಗದಿರುವುದು ನಿಮ್ಮ ವೈಫಲ್ಯ ಅಲ್ಲವೇ ಎಂದು ಪ್ರಶ್ನಿಸಿದ ಅವರು,ನಿಮ್ಮ ರಾಜಕಾರಣಕ್ಕಾಗಿ ನೀವು ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತೀರ.ನಿಮಗೆ ಯಾವುದೇ ಜಾತಿ,ಧರ್ಮವಾಗಲಿ ಇಲ್ಲ.ರಾಜಕೀಯಕ್ಕಾಗಿ ನೀವು ರಾಮನನ್ನು ಉಪಯೋಗಿಸುತ್ತೀರ, ಸೈನ್ಯ ವನ್ನು ಬಳಸುತ್ತೀರ ಎಂದು ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. .