ಕಾರ್ಕಳ, ಡಿ 18( DaijiworldNews/MS): ಬೆಲೆ ಏರಿಕೆ, ಕಾಮಗಾರಿಗಳಲ್ಲಿ 40% ಕಮಿಷನ್ ಹೀಗೆ ವೈಪಲ್ಯಗಳ ಸರಮಾಲೆಗಳನ್ನು ಹೊತ್ತು ರಾಜ್ಯ ಬಿಜೆಪಿ ಸರಕಾರ ಅಧಿಕಾರ ನಡೆಸುತ್ತಿದೆ. ತನ್ನ ವೈಪಲ್ಯ ಮುಚ್ಚಿ ಹಾಕಲು ಬಿಜೆಪಿ ಹೇಳಿಕೆಗಳನ್ನೆ ತಿರುಚುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದರು.
ಕಾರ್ಕಳದ ಗಾಂಧಿ ಮೈದಾನದಲ್ಲಿ ಮಾಜಿ ಶಾಸಕ ದಿ ಗೋಪಾಲ ಭಂಡಾರಿ ಸ್ಮರಣಾರ್ಥ ನಡೆಯುತ್ತಿರುವ ಕ್ರೀಡಾಕೂಟಕ್ಕೆ ರವಿವಾರ ಭೇಟಿ ನೀಡಿ ಮಾಧ್ಯಮದ ಜೊತೆ ಮಾತನಾಡಿದ ಅವರು ಬಿಜೆಪಿಯವರು ಹೇಳಿಕೆಗಳನ್ನು ತಿರುಚುವುದರಲ್ಲಿ ಮೊದಲಿನಿಂದಲೂ ನಿಸ್ಸಿಮರು. ಪಿಎಸ್ಐ ಹಗರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಬೆಲೆ ಏರಿಕೆ, ಸಾಲುಹಗರಣಗಳಿಂದ ಅದು ಕಂಗೆಟ್ಟಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜಕ್ಕೆ ಕೆಟ್ಟ ಹೆಸರು ಬಂದಿದೆ. ಜನ, ಯುವಕರು ಉದ್ಯೋಗ ಕೇಳುತ್ತಿದ್ದಾಾರೆ.ರಾಜ್ಯದ ರಸ್ತೆ ಗುಂಡಿಗಳು ಹಿರಿದಾಗುತ್ತಿದೆ ಎಂದು ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.
ಬೆಲೆ ಏರಿಕೆ ತಡೆಯಲು ಇವರಿಗೆ ಸಾಧ್ಯವಾಗಿಲ್ಲ. ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ಕಾರಣ ಬೇಕು ಅದಕ್ಕೆ ಸುಳ್ಳು ಸೃಷ್ಟಿಸಲಾಗುತ್ತಿದೆ ಎಂದರು. ಬಿಜೆಪಿ ನಾಲ್ಕು ವರ್ಷದಲ್ಲಿ ಏನೂ ಸಾಧನೆ ಮಾಡಿಲ್ಲ. ಮಾಡಿದ್ದರೆ ಜನರ ಮುಂದೆ ಸಾಧನೆಯ ಕಾರ್ಡ್ ಕೊಡಿ ಎಂದರು. ಸರಕಾರದ ವೈಪಲ್ಯ, ಸಾಲು ಭ್ರಷ್ಟಚಾರ ಇವುಗಳನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನಿಸಲಿದ್ದೇವೆ ಎಂದರು. ಕಾರ್ಕಳ ಕ್ಷೇತ್ರದಲ್ಲಿ ಮುತಾಲಿಕ್ ಸ್ಪರ್ಧೆ ಬಿಜೆಪಿ ಅಂಗ ಪಕ್ಷಗಳ ನಡುವಿನ ವಿಚಾರ ಎಂದರು. ಕಾರ್ಕಳದ ಜನ ಬದಲಾವಣೆ ಬಯಸಿದ್ದು ಕಾಂಗ್ರೆಸ್ ಗೆಲುವಿಗೆ ಎಲ್ಲರು ಒಂದಾಗಿ ಕೆಲಸ ಮಾಡಲಿದ್ದಾರೆ ಎಂದರು.
ಪ್ರಮುಖರಾದ ಸುರೇಂದ್ರ ಶೆಟ್ಟಿ ಕೃಷ್ಣ ಶೆಟ್ಟಿ ನೀರೆ, ಶುಭದ ರಾವ್ ಮತ್ತಿತರರು ಉಪಸ್ಥಿತರಿದ್ದರು.