ಬಳ್ಳಾರಿ ನ 1: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ಹೊಸ ಪಕ್ಷ ಕನ್ನಡ ರಾಜ್ಯೋತ್ಸವದಂದು ಉದಯವಾಗಿದೆ. ಅವರು ಬಳ್ಳಾರಿ ಜಿಲ್ಲೆ ಕೂಡ್ಲಗಿಯಲ್ಲಿ ಇಂದು "ಭಾರತೀಯ ಜನಶಕ್ತಿ ಕಾಂಗ್ರೆಸ್" ಎಂಬ ನೂತನ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ.ಕೂಡ್ಲಿಗಿಯಲ್ಲಿನ ರಾಷ್ಟ್ರಪಿತ ಮಹಾತ್ಮ ಗಾಂಧೀ ಚಿತಾಭಸ್ಮದ ಸ್ಮಾರಕಕ್ಕೆ ನಮನ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಮೂಲಕ ಸಮಾರಂಭ ನಡೆದ ಪಾಂಚಾಚಾರ್ಯ ಕಲ್ಯಾಣ ಮಂಟಪಕ್ಕೆ ಹಲವು ಜನರೊಂದಿಗೆ ಅವರು ಆಗಮಿಸಿದರು. ಬಳಿಕ ಮಾತನಾಡಿದ ಅನುಪಮ ನಮ್ಮ ಪಕ್ಷವು ಆಮ್ ಆದ್ಮಿ ಪಾರ್ಟಿ ಅರವಿಂದ ಕೇಜ್ರಿವಾಲರ ತತ್ವ ಹಾಗೂ ಕೆಲ ಪ್ರಯೋಗಗಳನ್ನು ಅಳವಡಿಸಿಕೊಳ್ಳಲಿದೆ. ನಾನು ಆಧಿಕಾರದಲ್ಲಿ ಇದ್ದಾಗ ಭ್ರಷ್ಟ ರಾಜಕಾರಣಿ ಹಾಗೂ ಅಧಿಕಾರಿಗಳನ್ನು ವಿರೋಧಿಸಿದ್ದೆ. ಆದರೆ ನಾನು ಎಂದೂ ರಾಜಕಾರಣವನ್ನು ವಿರೋಧಿಸಿಲ್ಲ. ಎಲ್ಲಾ ಪಕ್ಷಗಳು ಉತ್ತಮ ಆಡಳಿತ ಹಾಗೂ ಭ್ರಷ್ಟಚಾರ ವಿರೋಧಿ ಭರವಸೆಯನ್ನು ನೀಡುತ್ತಿವೆ ಆದರೆ ನಮ್ಮ ಪಕ್ಷ ಕಾನೂನಾತ್ಮಕ ಆಡಳಿತದ ಬಗ್ಗೆಯೂ ಗಮನ ಹರಿಸಲಿದೆ"ಅಲ್ಲದೇ ನೂತನ ಪಕ್ಷವು ಪ್ರಜಾಪ್ರಭುತ್ವದ ರಕ್ಷಣೆ, ಮದ್ಯಮುಕ್ತ ಸಮಾಜ, ಸರ್ಕಾರಿ ನೌಕರರಿಗೆ ಪ್ರೋತ್ಸಾಹ, ಇದೇ ಮೊದಲಾದ ದ್ಯೇಯೋದ್ದೇಶಗಳನ್ನು ಹೊಂದಿದೆ . ಭಾರತೀಯ ನಕ್ಷೆ, ತ್ರಿವರ್ಣ ಧ್ವಜದ ಬಣ್ಣ ಬಳಸಿರುವ ಚಿತ್ರ ಪಕ್ಷದ ಚಿಹ್ನೆಯಾಗಿದ್ದು ಚಿಹ್ನೆ ಮತ್ತು ಹೆಸರು ಚುನಾವಣಾ ಆಯೋಗದಿಂದ ಇನ್ನಷ್ಟೇ ಅಧಿಕೃತಗೊಳ್ಳಬೇಕಾಗಿದೆ.